ಶಿವ ಮತ್ತು ಪಾರ್ವತಿಯ ಪೂಜೆಯ ಸಮಯದಲ್ಲಿ ವಸ್ತುಗಳನ್ನು ಹಾಗೂ ವಿಧಾನಗಳನ್ನು ಬಳಸಬಾರದು -Vishwanews24

Featured, ರಾಜ್ಯ ನ್ಯೂಸ್

ಶಿವ ಮತ್ತು ಪಾರ್ವತಿಯ ಪೂಜೆಯ ಸಮಯದಲ್ಲಿ ವಸ್ತುಗಳನ್ನು ಹಾಗೂ ವಿಧಾನಗಳನ್ನು ಬಳಸಬಾರದು -Vishwanews24

ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಸ್ವರ್ಗದಲ್ಲಿ ಇರುವ ಎಲ್ಲಾ ದೇವತೆಗಳು ಸಹ ಸಮಾಧಾನವನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.

ಶಿವ ಮತ್ತು ಪಾರ್ವತಿಯ ಪೂಜೆಯ ಸಮಯದಲ್ಲಿ ಕೆಲವು ಸಂಗತಿಗಳನ್ನು ವಿಶೇಷವಾಗಿ ಅನುಸರಿಸಬೇಕು. ಅಂತೆಯೇ ಕೆಲವು ವಸ್ತುಗಳನ್ನು ಹಾಗೂ ವಿಧಾನಗಳನ್ನು ಪೂಜೆಯ ಸಂದರ್ಭದಲ್ಲಿ ಬಳಸಬಾರದು ಎಂದೂ ಹೇಳಲಾಗುತ್ತದೆ. ಶಿವ ಮತ್ತು ಪಾರ್ವತಿಗೆ ಇಷ್ಟವಿರದ ಸಂಗತಿಗಳಿಂದ ಪೂಜೆಗೈದರೆ ಅದು ಶಿವನ ಕೋಪಕ್ಕೆ ಕಾರಣವಾಗುವುದು. ಅದರಲ್ಲೂ ಶಿವನಿಗೆ ಅರಿಶಿಣವನ್ನು ಅರ್ಪಿಸುವುದು ಅಥವಾ ಲೇಪಿಸುವುದರ ಮೂಲಕ ಪೂಜೆಯನ್ನು ಮಾಡಬಾರದು. ಅದು ಶಿವನಿಗೆ ಇಷ್ಟವಿರದ ವಸ್ತು ಎನ್ನಲಾಗುವುದು.

ಧರ್ಮ ಗ್ರಂಥಗಳ ಪ್ರಕಾರ ಶಿವಲಿಂಗ ಎಂಬುದು ಪುರುಷನನ್ನು ಪ್ರತಿನಿಧಿಸುವುದು. ವಿಶೇಷವಾಗಿ ಶಿವನು ಅಗಾಧ ಶಕ್ತಿಯನ್ನು ಹೊಂದಿರುವ ದೇವ. ಅವನು ಸದಾ ಬೆಂಕಿಯಂತೆ ಇರುವನು. ಅವನಿಗೆ ತಂಪಾಗಿಸುವಂತಹ ಶ್ರೀಗಂಧ, ಹಾಲು, ಭಸ್ಮ, ಪತ್ರೆಗಳಂತಹ ತಂಪಾದ ವಸ್ತುಗಳನ್ನು ನೀಡಬೇಕು. ಅರಿಶಿಣವನ್ನು ಶಿವನಿಗೆ ನೀಡಬಾರದು. ಅದು ಅವನ ತಾಪವನ್ನು ತಣ್ಣಗಾಗಿಸದು. ಲೌಕಿಕ ಸುಖಗಳಿಂದ ದೂರ ಇರುವ ಬ್ರಹ್ಮಚಾರಿಯ ರೀತಿಯಲ್ಲಿಯೇ ಬದುಕಿದ್ದ ಶಿವನಿಗೆ ಅರಿಶಿಣವನ್ನು ಎಂದಿಗೂ ಅರ್ಪಿಸಬಾರದು.

ಶಿವನ ಆರಾಧನೆ ಅಥವಾ ಶಿವಲಿಂಗದ ಪೂಜೆಯ ಸಂದರ್ಭದಲ್ಲಿ  ಕೆಲವು ವಸ್ತುಗಳನ್ನು ಬಳಸಬಾರದು. ಅವು ಶಿವನಿಗೆ ಇಷ್ಟವಾಗದ ಸಂಗತಿಗಳಾಗಿರುತ್ತವೆ. ಹಾಗಾದರೆ ನೀವು ಶಿವನ ಪೂಜೆಯನ್ನು ಮಾಡುವಾಗ ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ಸಿಂಧೂರ ಮತ್ತು ಕುಂಕುಮವು ಭಾರತೀಯ ಪುರಾಣಗಳು ಮತ್ತು ಧಾರ್ಮಿಕ ವಿಚಾರಗಳ ಅನುಸಾರ ಅತ್ಯಂತ ಪವಿತ್ರವಾದ ವಸ್ತುಗಳು. ಇವುಗಳನ್ನು ದೇವರ ಪೂಜಾ ಕ್ರಮದಲ್ಲಿ ಕಡ್ಡಾಯವಾಗಿ ಬಳಸಲಾಗುವುದು. ಆದರೆ ಶಿವನ ಆರಾಧನೆ ಅಥವಾ ಶಿವಲಿಂಗದ ಪೂಜೆಯ ಸಮಯದಲ್ಲಿ ಕುಂಕುಮವನ್ನು ಅರ್ಪಿಸಬಾರದು. ಕುಂಕುಮವು ಸ್ತ್ರೀಯರೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ. ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯವನ್ನು ಆಶಿಸಿ ಕುಂಕುಮವನ್ನು ಬಳಸುತ್ತಾರೆ. ಶಿವನು ಲೌಕಿಕ ಜಗತ್ತು ಮತ್ತು ಸಂತೋಷಗಳೊಂದಿಗೆ ಸಂಬಂಧವನ್ನು ಪಡೆದುಕೊಂಡಿಲ್ಲ. ಭಸ್ಮ ಪ್ರಿಯನಾದ ಶಿವನಿಗೆ ಕುಂಕುಮವನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.

ಪುರಾಣ ಕಥೆಯ ಪ್ರಕಾರ ಮತ್ತು ಶಿವ ಪುರಾಣದಲ್ಲಿ ಉಲ್ಲೇಖಿಸಲಾದ ವಿಷಯಗಳ ಪ್ರಕಾರ ಶಿವನು ಜಲಂಧರ ಎಂಬ ರಾಕ್ಷಸನನ್ನು ಸುಟ್ಟುಹಾಕಿದನು. ಪತಿವ್ರತೆಯಾದ ವೃಂದಾಳ ಗಂಡನಾಗಿದ್ದ ಈತನು ದುಷ್ಟನಾಗಿದ್ದು, ಎಲ್ಲರಿಗೂ ತೊಂದರೆಯನ್ನು ನೀಡುತ್ತಿದ್ದನು. ಹಾಗಾಗಿ ವಿಷ್ಣು ಜಲಂಧರನ ರೂಪದಲ್ಲಿ ಬಂದು ಅವಳ ಪರಿಶುದ್ಧತೆಯನ್ನು ಹಾಳು ಮಾಡಿದನು. ನಂತರ ಅವಳನ್ನು ವಿವಾಹವಾದನು. ಈ ಸಂಗತಿಯಿಂದ ತುಳಸಿಗೆ ಶಿವನ ಮೇಲೆ ಕೋಪ ಬಂದಿತು. ಅದಕ್ಕಾಗಿ ತುಳಸಿ ತನ್ನ ಎಲೆಗಳಿಂದ ಶಿವನನ್ನು ಪೂಜಿಸಬಾರದು ಎಂದು ಬಹಿಷ್ಕರಿಸಿದ್ದಳು. ಈ ಹಿನ್ನೆಲೆಯಲ್ಲಿಯೇ ವಿಷ್ಣುವಿನ ಪತ್ನಿಯಾದ ತುಳಸಿಯನ್ನು ಶಿವನ ಪೂಜೆಗೆ ಬಳಸುವುದಿಲ್ಲ.

ಶಿವ, ಶಂಕರ, ಈಶ್ವರ, ಪರಮೇಶ್ವರ ಹೀಗೆ ವಿವಿಧ ನಾಮಗಳಿಂದ ಕರೆಯಲಾಗುವ ಶಿವನು ಅತ್ಯಂತ ಸರಳ ಹಾಗೂ ಭಕ್ತಿಯನ್ನು ಮೆಚ್ಚುವ ದೇವನು. ಅಪಾರ ಶಕ್ತಿಯನ್ನು ಹೊಂದಿರುವ ಶಿವ ದೇವನು ತನ್ನ ಭಕ್ತರ ಆಶಯವನ್ನು ಬಹುಬೇಗ ಈಡೇರಿಸುವನು. ಹಾಗಾಗಿ ಶಿವನ ಕೋಪಕ್ಕೆ ಕಾರಣವಾಗುವ ವಸ್ತುಗಳನ್ನು ಶಿವಲಿಂಗ ಅಥವಾ ಶಿವನ ಪೂಜೆಗೆ ಬಳಸದೆ, ಅವನಿಗೆ ಪ್ರಿಯವಾದ ವಸ್ತುಗಳನ್ನು ನಿರ್ಮಲ ಮನಸ್ಸಿನಿಂದ ಅರ್ಪಿಸಬೇಕು. ಆಗ ನಮ್ಮ ಜೀವನದಲ್ಲಿ ಸುಖ ಸಂತೋಷ ನೆಲೆಸುವುದು. ಮನದಿಂಗಿತಗಳು ಸುಲಭವಾಗಿ ನೆರವೇರುವುದು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ 

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681