ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಬೇಕು : ಹೊಸ ಅಭಿಯಾನ – Vishwanews24

Featured, ರಾಜ್ಯ ನ್ಯೂಸ್

ಹಿಂದೂ ಮಾಲೀಕರು ಮತ್ತು ಡ್ರೈವರ್‌ಗಳ ಜೊತೆಯಲ್ಲೇ ನಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಬೇಕು..

ಹಿಂದೂ ಚಾಲಕರಿಗೆ ನಾವು ಆರ್ಥಿಕವಾಗಿ ಬೆಂಬಲ ನೀಡಬೇಕು ಎಂದು ಮನವಿ..

ಹೊಸ ಅಭಿಯಾನಕ್ಕೆ ಕರೆ ಕೊಟ್ಟ ಭಾರತ್ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಂಗೇರಾ ..

ಬೆಂಗಳೂರು: ಹಿಜಬ್‍ಗೆ ಆಗ್ರಹಿಸಿ ಕರ್ನಾಟಕ ಬಂದ್ ನಡೆಸಿದ ಬಳಿಕ ದೇವಾಲಯಗಳಲ್ಲಿ ಅನ್ಯಧರ್ಮದ ವ್ಯಾಪಾರಿಗಳನ್ನು ನಿರ್ಬಂಧಿಸಲಾಯ್ತು, ಬಳಿಕ ಹಲಾಲ್‍ಗೆ ಜಟ್ಕಾ ಕಟ್ ಬಂತು. ಈಗ ಡ್ರೈವರ್‌ಗಳಿಗೂ ಬಿಸಿ ತಟ್ಟಿದೆ. ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಲಿ ಎಂದು ಭಾರತ್ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಂಗೇರಾ ಹೊಸ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ.

ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಬೇಕು. ಈಗಾಗಲೇ ಹಿಂದೂ ಸಮಾಜ ಒಂದಾಗಿ ಸಾಕಷ್ಟು ಅಭಿಯಾನ ಮಾಡಿ ಯಶಸ್ವಿಯಾಗಿದೆ. ನಾವು ಮತ್ತೊಂದು ಹೊಸ ಅಭಿಯಾನ ಆರಂಭ ಮಾಡಬೇಕಿದೆ ಎಂದು ಹೇಳಿ ಕರೆ ಕೊಟ್ಟಿದ್ದಾರೆ.

ಕೋಸ್ಟರಿಕಾ: ತುರ್ತು ಭೂಸ್ಪರ್ಶದ ವೇಳೆ ಎರಡು ತುಂಡಾದ ಕಾರ್ಗೊ ವಿಮಾನ – Vishwanews24

ಯಾರು ನಮ್ಮ ದೇವರನ್ನು ನಂಬುವುದಿಲ್ಲ. ನಮ್ಮ ದೇಶದ ಕಾನೂನಿಗೆ ಬೆಲೆ ಕೊಡುವುದಿಲ್ಲವೋ ಅವರ ವಾಹನದಲ್ಲಿ ಹೋಗಿ ನಮ್ಮ ದೇವರಿಗೆ ಹರಕೆ ಪೂಜೆ ಸಲ್ಲಿಸುತ್ತಿದ್ದೇವೆ. ಆದರೆ ಇಂದಿನಿಂದ ಹಿಂದೂ ಮಾಲೀಕರು ಮತ್ತು ಡ್ರೈವರ್‌ಗಳ ಜೊತೆಯಲ್ಲೇ ನಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಬೇಕು. ಈ ಮೂಲಕ ಹಿಂದೂ ಚಾಲಕರಿಗೆ ನಾವು ಆರ್ಥಿಕವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಗೋಮಾಂಸ ತಿನ್ನುವ ಚಾಲಕರೊಂದಿಗೆ ಧರ್ಮ ಕ್ಷೇತ್ರಕ್ಕೆ ಹೋಗುವ ಬದಲು, ನಮ್ಮ ಹಿಂದೂ ಸಮಾಜದ ಚಾಲಕರ ವಾಹನದಲ್ಲಿ ಯಾತ್ರೆಗೆ ಹೋಗೋಣ. ಹಿಂದೂ ಸಮಾಜದ ಚಾಲಕರು ಈಗಾಗಲೇ ಬೀದಿಗೆ ಬಿದ್ದಿದ್ದಾರೆ. ಇದರಿಂದ ನಮ್ಮ ಸಮಾಜದ ಚಾಲಕರು ಆರ್ಥಿಕ ಸಹಾಯ ಮಾಡೋಣ. ಈ ಅಭಿಯಾನಕ್ಕೆ ಹಿಂದೂ ಸಂಘಟನೆಗಳು ಬೆಂಬಲ ನೀಡಿ ಯಶಸ್ವಿಗೊಳಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಉಡುಪಿ : ಏ.10ಕ್ಕೆ  ಮಲ್ಪೆ ಕಡಲತಡಿಯಲ್ಲಿ  ‘ಕೋಸ್ಟಲ್ ಡೈನ್‌ ಫುಡ್‌ ಫೆಸ್ಟಿವಲ್‌ ; 399 ರೂ. ಗೆ ಅನ್‌ಲಿಮಿಟೆಡ್‌ ಫುಡ್‌  – Vishwanews24

Leave a Reply