ಅ.11ರಿಂದ ಉಚ್ಚಿಲ ದಸರಾ ವೈಭವ : ಚಿನ್ನದ ಹೊಳಪಿನಲ್ಲಿ ಕಂಗೊಳಿಸಲಿದೆ ದಸರಾ ದರ್ಬಾರ್ ಮಂಟಪ – vishwanews24

Featured, ಉಡುಪಿ

ಉಚ್ಚಿಲ ದಸರಾಗೆ ಭರ್ಜರಿ ಸಿದ್ಧತೆ:ಶಾರದಾ ಮಾತೆ, ನವದುರ್ಗೆಯರ ಆರಾಧನೆಗೆ ಸಜ್ಜು

ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪಂಚಮ ವರ್ಷದ ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಡಾ. ಜಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಸಂಘ, ಕ್ಷೇತ್ರಾಡಳಿತ ಸಮಿತಿ ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಅ.11ರಿಂದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಾಡಿನಾದ್ಯಂತ ಗಮನ ಸೆಳೆದಿರುವ ಉಚ್ಚಿಲ ದಸರಾ ಈ ಬಾರಿ ಮತ್ತಷ್ಟು ವೈಭವದಿಂದ ನಡೆಯಲಿದೆ. ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳ ರಚನೆ ಕಾರ್ಯ ನಡೆಯುತ್ತಿದ್ದು, ಉದ್ಯಾವರ ಶಂಕರ್ ಆರ್ಟ್ಸ್ ತಂಡದವರು ದಸರಾ ವೇದಿಕೆ ಹಾಗೂ ವಿಶೇಷ ದರ್ಬಾರ್ ಮಂಟಪವನ್ನು ಸಿದ್ಧಪಡಿಸುತ್ತಿದ್ದಾರೆ. ಚಿನ್ನದ ಹೊಳಪಿನ ದಸರಾ ದರ್ಬಾರ್ ಮಂಟಪ ವಿಶೇಷ ಆಕರ್ಷಣೆಯಾಗಲಿದೆ.

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ : ದೇಶಾದ್ಯಂತ ‘ಸೇವಾ ಸಂಕಲ್ಪʼ ಅಭಿಯಾನ – vishwanews24

ದಸರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಪ್ರತಿದಿನ ಚಂಡಿಕಾಯಾಗ ಹಾಗೂ ಅನ್ನದಾನ ನಡೆಯಲಿದೆ. ಸಂಜೆ ನಡೆಯುವ ಸಾಮೂಹಿಕ ಕುಂಕುಮಾರ್ಚನೆ ಸೇವೆಯೂ ವಿಶೇಷವಾಗಿದ್ದು, ರಾಜ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಶಾರದಾ ಮಾತೆ ಹಾಗೂ ನವದುರ್ಗೆಯರ ವಿಸರ್ಜನಾ ಪೂಜೆ ಸಂದರ್ಭದಲ್ಲಿ ನಡೆಯುವ ಶೋಭಾಯಾತ್ರೆ ಕೂಡ ಗಮನ ಸೆಳೆಯಲಿದೆ.

ರೂಪಕ, ಮ್ಯೂಸಿಕಲ್ ನೈಟ್, ನಾಟ್ಯ ವೈಭವ, ಸ್ಯಾಕ್ಟೋಫೋನ್ ಹಾಗೂ ಕೊಳಲು ವಾದನ, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಸಂಭ್ರಮಕ್ಕೆ ಮೆರುಗು ನೀಡಲಿವೆ. ಇದರ ಜೊತೆಗೆ ವಿವಿಧ ಸ್ಪರ್ಧೆಗಳು, ಮರಳು ಕಲಾಕೃತಿ, ಜೀವಂತ ಮೀನುಗಳ ಪ್ರದರ್ಶನ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ.

ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಪೂರಕ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಕರಾವಳಿಯ ಸಂಸ್ಕೃತಿ, ಕಲೆ ಮತ್ತು ಸೇವಾ ಪರಂಪರೆಯನ್ನು ಪರಿಚಯಿಸುವ ಹಲವು ಕಾರ್ಯಕ್ರಮಗಳು ದಸರಾ ಸಂದರ್ಭದಲ್ಲಿ ನಡೆಯಲಿವೆ.

 ಪಣಂಬೂರು ಬೀಚ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಹೆಜಮಾಡಿ ಕೋಡಿಯಲ್ಲಿ ಪತ್ತೆ – vishwanews24

ಹೆದ್ದಾರಿಯಲ್ಲೂ ಆಕರ್ಷಕ ವಿದ್ಯುದ್ದೀಪಾಲಂಕಾರ
ಉಚ್ಚಿಲ ದಸರಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯಿಂದ ಕಾಪು ಜಂಕ್ಷನ್‌ವರೆಗಿನ ಸುಮಾರು 10.50 ಕಿ.ಮೀ. ಹಾಗೂ ಎರ್ಮಾಳು ಡಿವೈಡರ್‌ನಿಂದ ಮೂಳೂರು ಡಿವೈಡರ್‌ವರೆಗಿನ ಸುಮಾರು 1.50 ಕಿ.ಮೀ. ಪ್ರದೇಶದಲ್ಲಿ ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗುತ್ತಿದೆ. ಆರ್‌ಜಿಬಿ ಟ್ಯೂಬ್‌ಗಳು, ವಾರ್ಮ್‌ ಲೈಟ್‌ಗಳು ಸೇರಿದಂತೆ ಲಕ್ಷಾಂತರ ಬಲ್ಸ್‌ಗಳನ್ನು ಬಳಸಿ ಹೆದ್ದಾರಿಯನ್ನು ಅಲಂಕರಿಸಲಾಗುತ್ತಿದೆ.

ದೇವಸ್ಥಾನದ ಸುತ್ತಲೂ ಸ್ಟ್ರೀಟ್ ಲೈಟ್ಸ್, ಬೋರ್ಡ್‌ಗಳು ಮತ್ತು ಎಲ್‌ಇಡಿ ಬಲ್‌ಗಳನ್ನು ಅಳವಡಿಸಲಾಗಿದ್ದು, ನವದುರ್ಗೆಯರ ಪ್ರತಿಕೃತಿ ಹಾಗೂ ದಸರಾ ಮಂಟಪದ ಅಲಂಕಾರವೂ ವಿಶೇಷವಾಗಿರಲಿದೆ. ದಸರಾ ವೈಭವವನ್ನು ಕಣ್ಣುಂಬಿಕೊಳ್ಳಲು ಆಗಮಿಸುವ ಭಕ್ತರಿಗೆ ಈ ವಿದ್ಯುದ್ದೀಪಾಲಂಕಾರ ಪ್ರಮುಖ ಆಕರ್ಷಣೆಯಾಗಲಿದೆ.

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ : ದೇಶಾದ್ಯಂತ ‘ಸೇವಾ ಸಂಕಲ್ಪʼ ಅಭಿಯಾನ – vishwanews24

ವರ್ಷದಿಂದ ವರ್ಷಕ್ಕೆ ಉಚ್ಚಿಲ ದಸರಾಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಉತ್ಸವವನ್ನು ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳು ಹಾಗೂ ಸ್ವಯಂಸೇವಕರು ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ

Leave a Reply