ಉಡಪಿ : ಪ್ರೊ. ಎಮ್. ಸುಧಾಕರ ರಾವ್ ನಿಧನ – Vishwanews24

Featured, ಉಡುಪಿ

ಉಡಪಿ : ಪ್ರೊ. ಎಮ್. ಸುಧಾಕರ ರಾವ್ ನಿಧನ

ಉಡಪಿ : ಎಮ್. ಸುಧಾಕರ ರಾವ್ (೮೪ ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕೆ. ಎಂ. ಸಿ. ಆಸ್ಪತ್ರೆಯಲ್ಲಿ ಇಂದು (೨೫-೦೭-೨೦೨೨) ಪೂರ್ವಾಹ್ನ ೮.೩೦ಕ್ಕೆ ನಿಧನರಾದರು.

ಬೀಡಿನಗುಡ್ಡೆಯಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನೆರವೇರಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂವತ್ತೇಳು ವರ್ಷಗಳ ಕಾಲ ಉಪನ್ಯಾಸಕರಾಗಿ, ಒಂದು ವರ್ಷ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದರು. ಜೀವಶಾಸ್ತçದ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ ಸುಧಾಕರ್ ರಾಯರು ಬರೆದ ಪುಸ್ತಕ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಠ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಪ್ರಸಿದ್ಧವಾಗಿದೆ.

ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘವೇಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಬಿ. ಎಂ. ಸೋಮಯಾಜಿ, ಕಾರ್ಯದರ್ಶಿ ತೇಜಸ್ವಿ ಶಂಕರ್ ಹಾಗೂ ಅಪಾರ ಸಂಖ್ಯೆಯ ಶಿಷ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ : ಜೆಡಿಎಸ್‌ಗೆ ಐದು ವರ್ಷದ ಅಧಿಕಾರ ಕೊಟ್ಟರೆ ಸಂಪೂರ್ಣ ಬಡತನ ನಿವಾರಣೆಗೆ ಬದ್ಧನಾಗುವೆ : ಎಚ್‌.ಡಿ.ಕುಮಾರಸ್ವಾಮಿ ಭರವಸೆ – Vishwanews24 

Leave a Reply