ಉಡುಪಿ: ಗ್ರಾಹಕನಂತೆ ನಟಿಸಿ ಚಿಕನ್ ಸೆಂಟರ್ ನಿಂದ 35 ಸಾವಿರ ಹಣ ಎಗರಿಸಿದ ಭೂಪ – Vishwanews24
ಉಡುಪಿ: ಗ್ರಾಹಕನಂತೆ ನಟಿಸಿ ಚಿಕನ್ ಸೆಂಟರ್ ನಿಂದ 35 ಸಾವಿರ ಹಣ ಎಗರಿಸಿದ ಭೂಪ
ಉಡುಪಿ: ಗ್ರಾಹಕನಂತೆ ನಟಿಸಿ ವ್ಯಕ್ತಿಯೋರ್ವ ಚಿಕನ್ ಸೆಂಟರ್ ನಿಂದ ಹಣ ಎಗರಿಸಿದ ಘಟನೆ ಜು.24ರಂದು ಸಂತೆಕಟ್ಟೆಯ ಕೆಮ್ಮಣ್ಣು ಕ್ರಾಸ್ ಬಳಿ ನಡೆದಿದೆ.
ಉಪ್ಪೂರು ಗ್ರಾಮದ ನಿವಾಸಿಯವರಾದ ವೊಜಿ ಜೆ ಲೂವಿಸ್ ಎಂಬವರು ಸಂತೆಕಟ್ಟೆಯ ಕೆಮ್ಮಣ್ಣು ಕ್ರಾಸ್ನಲ್ಲಿ ಎಕ್ತ ಹೈಟ್ಸ್ ಎಂಬ ಕಟ್ಟಡದಲ್ಲಿ ಲೂವಿಸ್ ಚಿಕನ್ ಸೆಂಟರ್ ಅಂಗಡಿಯನ್ನು ನಡೆಸುತ್ತಿದ್ದರು. ಜು .24 ರ ಭಾನುವಾರ ಸಂಜೆ 5.45 ಕ್ಕೆ ಬಂದ ವಿದೇಶದ ವ್ಯಕ್ತಿಯಂತೆ ಕಾಣುವ ಓರ್ವ ಅಪರಿಚಿತ ವ್ಯಕ್ತಿಯೋರ್ವ ಮೊಟ್ಟೆ ನೀಡುವಂತೆ ಕೇಳಿದ್ದಾರೆ. ಈ ವೇಳೆ ಲೂವಿಸ್ ಅವರು ಮೊಟ್ಟೆಗಳನ್ನು ಕಟ್ಟುತ್ತಿರುವಾಗ ಅಪರಿಚಿತ ವ್ಯಕ್ತಿಡ್ರಾವರ್ನಲ್ಲಿ ಇಟ್ಟಿದ್ದ ರೂ. 35,000 ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
ಅಪರಿಚಿತ ವ್ಯಕ್ತಿ ಯಲ್ಲಿ ಕೃತ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೋಲಿಸರು ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ- ಕುಟುಂಬಸ್ಥರ ಆಕ್ರಂದನ-vishwanews24
