ಓಮನ್ ಬಿಲ್ಲವಾಸ್ 2023-24 : ಪದಾಧಿಕಾರಿಗಳಿಂದ ಪ್ರಮಾಣವಚನ – Vishwanews24
ಓಮನ್ ಬಿಲ್ಲವಾಸ್ 2023-24- ಪದಾಧಿಕಾರಿಗಳಿಂದ ಪ್ರಮಾಣವಚನ
ಓಮನ್ ಬಿಲ್ಲವಾಸ್ 2023 – 24 ನೇ ಸಾಲಿನ ಹೊಸ ಸಮಿತಿಯ ಪ್ರಮಾಣವಚನ ಕಾರ್ಯಕ್ರಮವು ಮಸ್ಕತ್ತಿನ ಅಝೈಭಾ ಗಾರ್ಡನ್ ಹಾಲ್ ನಲ್ಲಿ ಜನವರಿ 06 ರಂದು ಶುಕ್ರವಾರ ಸಂಭ್ರಮದಿಂದ ನಡೆಯಿತು. ಅಧ್ಯಕ್ಷರಾಗಿ ಶ್ರೀಯುತ ಸುಜಿತ್ ಎಸ್. ಅಂಚನ್ ಪಾಂಗಾಳ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಿರಿಯರಾದ ಶ್ರೀ ರಾಮಕೃಷ್ಣ ಸುಜೀರ್ ಪ್ರಮಾಣವಚನ ಭೋದಿಸಿ ಆಶೀರ್ವಚನವಿತ್ತರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ಡಾ. ಅಂಚನ್ ಸಿ. ಕೆ, ಆಯ್ಕೆ ಸಮಿತಿಯ ಶ್ರೀ ಕೃಷ್ಣ ಪ್ರಸಾದ್ ಮತ್ತು ಶ್ರೀ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವ ಸದಸ್ಯರು ಉಪಸ್ಥಿತರಿದ್ದರು..
ಓಮನ್ ಬಿಲ್ಲವಾಸ್ : ಅಧ್ಯಕ್ಷರಾಗಿ ಸುಜಿತ್ ಎಸ್ ಪಾಂಗಾಳ ಆಯ್ಕೆ – Vishwanews24
