ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್ಗಾಗಿ ಕ್ಯಾಬಿನಟ್ ಸಭೆ : ಯತ್ನಾಳ್ ಲೇವಡಿ – vishwanews24
ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್ಗಾಗಿ ಕ್ಯಾಬಿನಟ್ ಸಭೆ : ಯತ್ನಾಳ್ ಲೇವಡಿ
ಉಡುಪಿ: ಕರಾವಳಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಸಭೆ ಕರೆದು ಏನು ಮಾಡಲಾಗುತ್ತದೆ? ಕೇವಲ ಕರಾವಳಿಯ ಮೀನು ತಿನ್ನಲು ಕ್ಯಾಬಿನೆಟ್ ಸಭೆ ನಡೆಸಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ ನೂರಾರು ಕೋಟಿ ರೂ.ಗಳ ಆಶ್ವಾಸನೆ ನೀಡಿದ್ದರು. ಆದರೆ ಅವುಗಳಲ್ಲಿ ಒಂದೂ ಈಡೇರಿಲ್ಲ ಎಂದು ಯತ್ನಾಳ್ ಆರೋಪಿಸಿದರು. ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್ಗಾಗಿ ಸಭೆ ನಡೆಸಲಾಗುತ್ತಿದೆ.
ಉಡುಪಿ: ವಿದ್ಯಾರ್ಥಿಗಳಿಗೆ MDMA ಮಾರಾಟ: ಇಬ್ಬರ ಬಂಧನ – vishwanews24
ವಿಧಾನಸಭೆಯಲ್ಲಿ ಕರಾವಳಿ ಭಾಗದ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚಿಸುತ್ತಾರೆ. ಆದರೆ ಈವರೆಗೆ ಎಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಘೋಷಣೆಗಳು ಕಾರ್ಯರೂಪಕ್ಕೆ ಬರಬೇಕು ಎಂದರು.
ರಾಜ್ಯದಲ್ಲಿ ಮುಂದುವರಿದಿರುವ ವಂದೇ ಮಾತರಂ ವಿವಾದದ ಕುರಿತು ಮಾತನಾಡಿದ ಯತ್ನಾಳ್, ಕೆಪಿಸಿಸಿ ಅಧ್ಯಕ್ಷರಿಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ಕಾಳಜಿಯೇ ಅಥವಾ ಕರ್ನಾಟಕದ ಬಗ್ಗೆ ಕಾಳಜಿಯೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.
ಮುಸ್ಲಿಂ ವೋಟ್ ಬ್ಯಾಂಕ್ಗಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಹಿಂದುಗಳು ಹಾಗೂ ದೇಶದ ಪರವಾಗಿ ಒಂದಾದರೂ ಹೇಳಿಕೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. ವಂದೇ ಮಾತರಂ ಹೇಳುವುದರಲ್ಲಿ ತಪ್ಪೇನಿದೆ? ದೇಶಕ್ಕೆ ತಾಯಿಯ ಗೌರವ ನೀಡುವುದರಲ್ಲಿ ಕೋಮು ಗಲಭೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಬೆಳ್ತಂಗಡಿ: ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಸಿಮೆಂಟ್ ಚಾವಣಿ ಕುಸಿದು ಯುವ ಕಾರ್ಮಿಕ ಸಾವು – vishwanews24
ಕೆಪಿಸಿಸಿ ಅಧ್ಯಕ್ಷರು ಇಂತಹ ಹೇಳಿಕೆ ನೀಡುವುದರ ಹಿಂದೆ ರಾಹುಲ್ ಗಾಂಧಿ ಅವರ ಕುಮ್ಮಕ್ಕಿದೆ ಎಂದು ಯತ್ನಾಳ್ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಹಾಗೂ ರಷ್ಯಾ ಅಧ್ಯಕ್ಷರ ಮುಂದೆ ದೇಶದ ಗೌರವ ಕಾಪಾಡಿಕೊಂಡು ನಡೆದುಕೊಂಡಿದ್ದಾರೆ. ಮೋದಿ ಅವರು ಬಗ್ಗಿದರು, ಅಮೆರಿಕದವರ ಮುಂದೆ ಬಗ್ಗಿದರು ಎಂಬ ಟೀಕೆ ಸರಿಯಲ್ಲ ಎಂದರು.
