ಚಾಮುಂಡಿ ಬೆಟ್ಟದ ʻ ರೋಪ್ ವೇಗೆ ಬ್ರೇಕ್‌ ʼ : ಸ್ಪಷ್ಟನೆ ನೀಡಿದ ಸಚಿವ ಎಸ್‌.ಟಿ ಸೋಮಶೇಖರ್‌ – Vishwanews24

Featured, ರಾಜ್ಯ ನ್ಯೂಸ್

ಚಾಮುಂಡಿ ಬೆಟ್ಟದ ʻ ರೋಪ್ ವೇಗೆ ಬ್ರೇಕ್‌ ʼ : ಸ್ಪಷ್ಟನೆ ನೀಡಿದ ಸಚಿವ ಎಸ್‌.ಟಿ ಸೋಮಶೇಖರ್‌ 

ಮೈಸೂರು : ಚಾಮುಂಡಿ ಬೆಟ್ಟ ರೋಪ್‌ ವೇಗೆ ಭಾರೀ ವಿರೋಧ ಹಿನ್ನೆಲೆ ʻ ರೋಪ್‌ ವೇ ಮಾಡೊದಕ್ಕೆ ಬ್ರೇಕ್‌ ಹಾಕಲಾಗಿದೆ ʼ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್‌ ತಿಳಿಸಿದ್ದಾರೆ

ಈಗಾಗಲೇ ಕೇಂದ್ರ ಹಾಗೂ ರಾಜ್ಯಸರ್ಕಾರ ಈ ಯೋಜನೆ ಜಾರಿಗೆ ತರುವಂತೆ ಹೇಳಿತ್ತು ಆದರೇ ಇದೀಗ ಭಾರೀ ವಿರೋಧದ ಹಿನ್ನೆಲೆ ನಡೆದ ಸಭೆಯ ಬಳಿಕ ಈ ಯೋಜನೆಯನ್ನು ಇದೀಗ ಜಿಲ್ಲಾಡಳಿತವೇ ಕೈಬಿಟ್ಟಿದೆ ಹಾಗಾಗಿ ಚಾಮುಂಡಿ ಬೆಟ್ಟ ರೋಪ್‌ ವೇ ಮಾಡೊದಕ್ಕೆ ಬ್ರೇಕ್‌ ಹಾಕಲಾಗಿದೆ.

ಚಾಮುಂಡಿ ಬೆಟ್ಟ ಪ್ರಸಿದ್ಧಧಾರ್ಮಿಕ ಕ್ಷೇತ್ರವಾಗಿದೆ. ಬೆಟ್ಟಕ್ಕೆ ಹೋಗೋದಕ್ಕೆ ಭಕ್ತಧಿಗಳಿಗೆ ಮೆಟ್ಟಿಲು ,ರಸ್ತೆಯ ಮಾರ್ಗಗಳಿವೆ. ಪ್ರವಾಸಿಗರು ಧಾರ್ಮಿಕ ಭಾವನೆಯಿಂದ ಬರುತ್ತಾರೆ. ಅಭಿಪ್ರಾಯಕ್ಕೆ ಮನ್ನಣೆ ನೀಡಿ ಯೋಜನೆ ಕೈಬಿಟ್ಟಿದ್ದೇವೆ . ಇನ್ನೂ ಚಾಮುಂಡಿ ಬೆಟ್ಟಕ್ಕೆ ಬಸ್ಸುಗಳ ವ್ಯವಸ್ಥೆಯೂ ಇದೆ. ಸದ್ಯದ ಮಟ್ಟಿಗೆ ಬ್ರೇಕ್‌ ಹಾಕಲಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ  SDRF ತಂಡ ಆಗಮನ – Vishwanews24

Leave a Reply