ನವೆಂಬರ್ ಮೊದಲ ವಾರದಲ್ಲಿ ಉಡುಪಿ ನಗರಕ್ಕೆ ಪೈಪ್‌ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಪೂರೈಕೆ – vishwanews24

Featured, ಉಡುಪಿ

ನವೆಂಬರ್ ಮೊದಲ ವಾರದಲ್ಲಿ ಪೈಪ್‌ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಪೂರೈಕೆ

ಮಣಿಪಾಲ: ನವೆಂಬರ್ ಮೊದಲ ವಾರದಲ್ಲಿ ಪೈಪ್‌ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಪೂರೈಕೆ ಮಾಡುವುದಾಗಿ ಅದಾನಿ ಸಂಸ್ಥೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಉಪಸ್ಥಿತಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದೆ. ಸಂಸ್ಥೆಯ ಅಧಿಕಾರಿಗಳು ನವೆಂಬರ್‌ವೊದಲ ವಾರದಲ್ಲಿ ಪೈಪ್‌ಲೈನ್ ಮೂಲಕ ಗ್ಯಾಸ್ ವಿತರಣೆ ಮಾಡುವುದಾಗಿ ಸಭೆಗೆ ತಿಳಿಸಿದ್ದಾರೆ.

 ಉಡುಪಿ :  ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ – vishwanews24

ಸುಮಾರು 25,000 ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಇಲಾಖಾ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಂಸದರು, ಪಣಂಬೂರಿನಿಂದ ಕರಾವಳಿ ಜಂಕ್ಷನ್‌ವರೆಗೆ ಸುಮಾರು 48 ಕಿ. ಮೀ. ಪೈಪ್‌ಲೈನ್ ವಿಸ್ತರಣೆಯಾಗಿದ್ದು, ಮುಂದುವರಿದು ಕರಾವಳಿ ಜಂಕ್ಷನ್‌ನಿಂದ ಮಣಿಪಾಲದ ಉಪೇಂದ್ರ ಪೈ ವೃತ್ತದ ವರೆಗೆ ಪೈಪ್‌ಲೈನ್ ಸಂಪರ್ಕವಾಗಿದ್ದು, ತತ್‌ಕ್ಷಣ ಮನೆಮನೆಗೆ ಗ್ಯಾಸ್ ವಿತರಣೆ ಆರಂಭಿಸಬೇಕೆಂದು ನಿರ್ದೇಶಿಸಿದರು.

ಸುಮಾರು 2,000 ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ಪೈಪ್‌ಲೈನ್ ಮೂಲಕ ಗ್ಯಾಸ್ ಹಂಚಿಕೆಗಾಗಿ ಸಂಪರ್ಕ ಕಲ್ಪಿಸಲಾ ಗುತ್ತಿದೆ. 300 ಕಿ. ಮೀ. ವ್ಯಾಪ್ತಿಯ ಪೈಪ್‌ಲೈನ್ ವಿಸ್ತರಣ ಜಾಲವು ಯೋಜನೆಯ ಗುರಿಯಾಗಿದ್ದು, ಸುಮಾರು 200 ಕಿ. ಮೀ.ವರೆಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ನಗರಸಭಾ ಅಧಿಕಾರಿಗಳು ಮಳೆಗಾಲದಲ್ಲಿ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದ್ದರಿಂದ ಅಕ್ಟೋಬರ್‌ನಲ್ಲಿ ಕಾಮಗಾರಿ ಪುನಃ ಆರಂಭಿಸಿ, ನವೆಂಬರ್‌ವೊದಲ ವಾರದಲ್ಲಿ ಮನೆಮನೆಗೆ ಅಡುಗೆ ಗ್ಯಾಸ್ ಸಂಪರ್ಕ ನೀಡಲು ಅದಾನಿ ಸಂಸ್ಥೆಗೆ ಸೂಚಿಸಿದರು.

 ಉಡುಪಿ : ನೇಪಾಳದಲ್ಲಿ ಸಂಕಷಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ಜನರ ಮಾಹಿತಿ ನೀಡಲು ಸೂಚನೆ – vishwanews24

ಗೇಲ್ ಸಂಸ್ಥೆಯು ಅನಿಲ ಸರಬರಾಜು ವ್ಯವಸ್ಥೆಯಲ್ಲಿನ ಕಾಮಗಾರಿಯನ್ನು ಪೂರ್ತಿ ಮುಗಿಸಿದ್ದರೂ ಪಣಂಬೂರಿನಲ್ಲಿ ಗ್ಯಾಸ್ ವಿತರಣ ವ್ಯವಸ್ಥೆಯ ಯೋಜನೆಯು ಪೂರ್ಣ ಗೊಂಡಿದ್ದರಿಂದ ಜಿಲ್ಲೆಯಲ್ಲಿ ಬಳಕೆಯಿರುವ ಸಿ.ಎನ್.ಜಿ. ವಿತರಣ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಸಿ.ಎನ್.ಜಿ. ಪೂರೈಸುವ ಬಗ್ಗೆ ಸಭೆಗೆ ತಿಳಿಸಿದರು. ಅರ್ಜಿ ಹಾಕಿದ ವಿತರಣ ಸಂಸ್ಥೆಗೆ ಗ್ಯಾಸ್ ಸಂಪರ್ಕ ನೀಡಲು ಸಭೆಗೆ ತಿಳಿಸಿದರು.

ನಗರಸಭೆಯ ಕಾರ್ಯಪಾಲಕ ಅಭಿಯಂತ ದುರ್ಗಾ ಪ್ರಸಾದ್, ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ ಸುಬ್ರಹ್ಮಣ್ಯ, ಗೇಲ್ ಕಂಪೆನಿ ಡೆಪ್ಯುಟಿ ಜನರಲ್ ಮ್ಯಾನೇಜರ್‌ಪ್ರಿನ್ಸ್ ಲಾರೆನ್ಸ್, ಆಹಾರ ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್‌ಪ್ರಕಾಶ್ ಉಪಸ್ಥಿತರಿದ್ದರು.

ಉಡುಪಿ:  ವ್ಯಕ್ತಿ ನಾಪತ್ತೆ – vishwanews24

Leave a Reply