ಬಿಜೆಪಿ ಸರಕಾರವನ್ನು ಉರುಳಿಸಲು ನಡೆಯುತ್ತಿರುವ ಹೋರಾಟ: ಪ್ರಕಾಶ್ ರಾಜ್ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಎಸ್ ಐಆರ್ ವಿರುದ್ಧ ‘ಸಾಮೂಹಿಕ ಜನತಾ ನಡಿಗೆ’

ಮೋದಿಯವರೇ, ನೀವು ಹೆಚ್ಚು ದಿನ ಅಧಿಕಾರದಲ್ಲಿರುವುದಿಲ್ಲ; ನಿಮ್ಮ ಪಾಪದ ಕೊಡ ತುಂಬಿದೆ : ಪ್ರಕಾಶ್ ರಾಜ್ ವಾಗ್ದಾಳಿ

ಮಂಗಳೂರು: ಇದು ಮತದಾನದ ಹಕ್ಕು ಕಸಿಯುವ ಎಸ್ ಐಆರ್ ವಿರುದ್ಧ ಮಾತ್ರವಲ್ಲ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಹಾಗೂ ಆರೆಸ್ಸೆಸ್ ಪ್ರೇರಿತ ಸರಕಾರವನ್ನು ಉರುಳಿಸಲು ನಡೆಯುತ್ತಿರುವ ಹೋರಾಟ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಎಸ್ ಐಆರ್ ವಿರುದ್ಧ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಿ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಶನಿವಾರ ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ನಡೆದ ‘ಜನತಾ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ :

ತಮಿಳುನಾಡು ಜೈಲಿನಿಂದ ಖೈದಿಗಳು ಪರಾರಿ ಪ್ರಕರಣ: ಹಿರಿಯ ಜೈಲಾಧಿಕಾರಿ ಅಮಾನತು, ಸಿಬ್ಬಂದಿ ವರ್ಗಾವಣೆ : ಸಿಎಂ ವಿಜಯ್ ಆದೇಶ – vishwanews24

ಸಾಕ್ಷಿ ನಾಶ ಮಾಡಲು ಹೋಗಿ ಮೋದಿ- ಅಮಿತ್ ಶಾ ರಂಗ-ಬಿಲ್ಲಾ ಜೋಡಿ ಸಿಕ್ಕಿಬಿದ್ದಿದೆ ಎಂದು ಪ್ರಕಾಶ್ ರಾಜ್ ಹೇಳಿದರು.

ನಮ್ಮ ಸರಕಾರ ಉರುಳಿಸಲು ಬಂದಿರುವುದು ಎಂದು ಮೋದಿ ನಮ್ನ ಹೋರಾಟದ ಬಗ್ಗೆ ಹೇಳಿದ್ದಾರೆ. ಹೌದು ನಾವು ನಿಮ್ಮ ಸರಕಾರ ಉರುಳಿಸಲು ಬಂದಿರುವುದು. ಆದರೆ ನಾವು ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನದಂತೆ ಅಲ್ಲ. ನಾವು ಪ್ರೀತಿಯಿಂದ, ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕಿನಿಂದ ಈ ರಂಗ-ಬಿಲ್ಲಾ ಬಿಜೆಪಿ ಸರಕಾರವನ್ನು ಬುಡ ಸಮೇತ ಇಳಿಸಲು ಬಂದಿರುವುದಾಗಿ ಅವರು ಹೇಳಿದರು.

ಎಸ್ಐಆರ್ ಬರೀ ಮತ ಕಳ್ಳತನ ಅಲ್ಲ, ಇದು ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಿಸಿರುವ ಮತಗಳನ್ನು ಅಳಿಸಿ ಹಾಕಲು ತಂದಿರುವುದು. ಅದಕ್ಕಾಗಿ ಅದರ ವಿರುದ್ಧ ಈ ಹೋರಾಟ. ಈ ಹೋರಾಟ ಗೆಲ್ಲುವುದು ಪ್ರಜೆಗಳಿಂದ ಮಾತ್ರ. ಇದು ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ ನಾವು ಓಟಿನ ಮಿಷಿನ್ ಮಾತ್ರ. ಮೋದಿಯವರೇ ನೀವು ಅಧಿಕಾರದಲ್ಲಿ ತುಂಬ ದಿನ ಇರುವುದಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಎಂದು ಪ್ರಕಾಶ್ ರಾಜ್ ಹೇಳಿದರು.

ಇದನ್ನೂ ಓದಿ :

ಎಸ್‌ಐಟಿಯಿಂದ ಸೌಜನ್ಯ ಪ್ರಕರಣದ ಮರುತನಿಖೆ ಆರಂಭ : ಮೃತದೇಹ ಪತ್ತೆಯಾದ ಜಾಗಕ್ಕೆ ಭೇಟಿ – vishwanews24

ಕರಾವಳಿಯ ಜನರನ್ನು ಹುಂಬರನ್ನಾಗಿ, ಮಂಗಗಳಾಗಿ ಮೆದುಳಿಗೆ ಸೆಗಣಿ ತುಂಬುತ್ತಿದ್ದಾರೆ. ದ.ಕ. ಜಿಲ್ಲೆಯ ಆರೋಗ್ಯ, ಆರ್ಥಿಕ ಸ್ಥಿತಿ ಯುವಕರ ಉದ್ಯೋಗ ಏನಾಗಿದೆ. ಸೌಹಾರ್ದ ಏನಾಗಿದೆ. ನಿಮ್ಮ ಬುಡಕ್ಕೂ ಬರಲಿದ್ದಾರೆ. ಜೈಲಿನಲ್ಲಿರುವುದು ನಮ್ಮ ಯುವಕರು ಇದನ್ನು ಅರಿತು ಕೊಳ್ಳಬೇಕು ಎಂದು ಹೇಳಿದ ಪ್ರಕಾಶ್ ರಾಜ್, ಓಟು ಹಾಕುವುದು ಅದು ನಮ್ಮ ಹಕ್ಕು, ಅದನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಮೋದಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ಪಕ್ಷ ಹಾಗೂ ಸಂಘಟನೆಗಳ ನಾಯಕರಾದ ಪದ್ಮರಾಜ್ ಆರ್., ಎಂ.ಜಿ.ಹೆಗಡೆ, ದಿನೇಶ್ ಹೆಗ್ಡೆ ಉಳೇಪಾಡಿ, ಲಕ್ಷ್ಮೀಶ ದಬ್ಬಲಡ್ಕ, ಅಶ್ರಫ್, ವಿ.ಕುಕ್ಯಾನ್, ಜಯಂತಿ ಬಿ. ಶೆಟ್ಟಿ, ಶೇಖರ್ ವಾಮಂಜೂರು ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :

ರಾಜ್ಯೋತ್ಸವ ಪಟ್ಟಿಯಿಂದ ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ – vishwanews24

ಡಿವೈಎಫ್ ಐ ಜಿಲ್ಲಾಧ್ಯಕ್ಷ ಮನೋಜ್ ವಾಮಂಜೂರು ಕಾರ್ಯಕ್ರಮ ನಿವರ್ಹಿಸಿದರು. ಸಂತೋಷ ಬಜಾಲ್ ವಂದಿಸಿದರು.

Leave a Reply