ಬೆಳ್ತಂಗಡಿ: ಹಾವು ಕಚ್ಚಿ ಬಾಲಕಿ ಗಂಭೀರ – vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ಅಂಗನವಾಡಿಯಲ್ಲಿ ಆಟಿಕೆಯ ನಡುವೆ ಅಡಗಿದ್ದ ಹಾವು ಕಚ್ಚಿ ಬಾಲಕಿ ಗಂಭೀರ

ಬೆಳ್ತಂಗಡಿ: ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಹಾವು ಕಚ್ಚಿದ ಆತಂಕಕಾರಿ ಘಟನೆ ಮಂಗಳವಾರ ನಡೆದಿದೆ.

ಹಾವು ಕಚ್ಚಿದ್ದರಿಂದ ಅಸ್ವಸ್ಥಗೊಂಡಿರುವ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ವಂಚನೆ ಪ್ರಕರಣ :  ಝೀನತ್ ಜಾಮೀನು ಅರ್ಜಿ ತಿರಸ್ಕೃತ – vishwanews24

ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಶಿಹಾಬ್ ಎಂಬವರ ಪುತ್ರಿ ಫಾತಿಮತ್ ಸಅದಿಯಾ(4) ಹಾವು ಕಚ್ಚಿದ್ದರಿಂದ ಅಸ್ವಸ್ಥಗೊಂಡ ಬಾಲಕಿ.

ಮಾಹಿತಿಯ ಪ್ರಕಾರ ಫಾತಿಮತ್ ಸಅದಿಯಾ ಎಂದಿನಂತೆ ಮಂಗಳವಾರವೂ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ತರಗತಿ ಕೊಠಡಿಯೊಳಗೆ ಆಟಿಕೆಗಳ ನಡುವೆ ಅಡಗಿದ್ದ ಹಾವು ಬಾಲಕಿಗೆ ಕಚ್ಚಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಅಂಗನವಾಡಿ ಸಹಾಯಕಿ ಕೂಡಲೇ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಉಡುಪಿ:  ನೇರ ಸಂದರ್ಶನ – vishwanews24

Leave a Reply