ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್
ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಪ್ರಕ್ರಿಯೆ ಸುಗಮವಾಗಿ ಮುನ್ನಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ರವಿವಾರ ಅವರು ಸಭೆ ನಡೆಸಿ ಬಳಿಕ ಮಾತನಾಡಿ, ಹೈಕೋರ್ಟ್ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾದರೆ ಅದು ಕೇವಲ ಕಕ್ಷಿದಾರರು, ವಕೀಲರಿಗೆ ಮಾತ್ರ ಉಪಯೋಗವಾಗುವುದಲ್ಲ, ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪರೋಕ್ಷವಾಗಿ ನೆರವಾಗಲಿದೆ ಎಂದರು.
ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24
ಹಲವು ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಕೊಟ್ಟಿದ್ದಾರೆ, ಈಗಿನ ಮುಖ್ಯಮಂತ್ರಿಯವರು ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರೆ. ಈಗಾಗಲೇ ಮೂವರು ನ್ಯಾಯಾ ಧೀಶರಾದ ಜ| ಅನು ಶಿವರಾಮನ್, ಜ| ಎಸ್.ಜಿ. ಪಂಡಿತ್, ಜ|ಮೊಹಮ್ಮದ್ ನವಾಜ್ ಅವರಿರುವ ಸಮಿತಿಯನ್ನು ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಚಿಸಿ ಆದೇಶಿಸಿದ್ದಾರೆ, ಈ ಸಮಿತಿ ಆಗಮಿಸುವಾಗ ಬೇಕಾದಂತಹ ಮಾಹಿತಿ ಒದಗಿಸುವುದಕ್ಕೆ ಚೆಕ್ ಲಿಸ್ಟ್ ಸಿದ್ಧಪಡಿಸಿ ಕಾರ್ಯವೆಸಗಬೇಕಿದೆ, ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರನ್ನೊಳಗೊಂಡಂತೆ ಸಮಿತಿ ರಚಿಸಲಾಗುವುದು ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಈ ಹೈಕೋರ್ಟ್ ಪೀಠ ಸ್ಥಾಪನೆಗೆ ಎಲ್ಲರದ್ದೂ ಒಂದೇ ಧ್ವನಿಯಾಗಿದೆ. ಈ ಕುರಿತು ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಾಗಿದೆ. ಅಲ್ಲದೆ ಇತರ ಜಿಲ್ಲೆಯವರಲ್ಲೂ ಈ ಕುರಿತು ಒಗ್ಗಟ್ಟು ಮೂಡಿಸಬೇಕಿದೆ ಎಂದರು.
ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ – vishwanews24
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಹೈಕೋರ್ಟ್ ಪೀಠ ಬಂದರೆ 4-5 ನ್ಯಾಯಾಧೀಶರು ಬರುತ್ತಾರೆ. ಒಬ್ಬೊಬ್ಬರು ಕನಿಷ್ಠ ವರ್ಷಕ್ಕೆ 1,200 ಪ್ರಕರಣ ಇತ್ಯರ್ಥ ಪಡಿಸುತ್ತಾರೆ. ಇದರಿಂದ ಸಮಯ, ಹಣ ಉಳಿತಾಯವಲ್ಲದೆ ಪ್ರಕರಣಗಳೂ ತ್ವರಿತವಾಗಿ ವಿಲೇವಾರಿಗೊಳ್ಳಬಹುದು ಎಂದರು.
ದಸರಾ ಮಹೋತ್ಸವ ನಡೆದ ಕೂಡಲೇ ನೆರೆಯ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಣ್ಯರು, ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಎಲ್ಲ ಜಿಲ್ಲೆಯವರೂ ಒಗ್ಗಟ್ಟಾಗಿದ್ದರೆ ಪೀಠ ಸ್ಥಾಪನೆ ಬೇಡಿಕೆಗೆ ಬಲ ಬರಲಿದೆ ಎಂದು ಸಚಿವ
ಖಾದರ್ ತಿಳಿಸಿದರು.
ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ : ಅಕ್ಷಿತ್ ಸುವರ್ಣ – vishwanews24
