ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ – vishwanews24
ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ದಳದ ದಕ್ಷ ಹಾಗೂ ಪ್ರಾಮಾಣಿಕ ಸಿಬ್ಬಂದಿ ವಿ.ಯಂ ಕಾರ್ತಿಕ್ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ.
ಮಂಗಳೂರಿನ ಕುಂಪಲ ನಿವಾಸಿಯಾಗಿರುವ ಕಾರ್ತಿಕ್ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹುದ್ದೆಗೆ 2008ರಲ್ಲಿ ಸೇರ್ಪಡೆಗೊಂಡರು. ಅವರು ತರಬೇತಿಯನ್ನು ಬೆಂಗಳೂರಿನ ಆರ್.ಎ ಮುಂದ್ಕೂರು ತರಬೇತಿನ ಕೇಂದ್ರದಲ್ಲಿ ತರಬೇತಿಯನ್ನು ಪಡೆದರು.
ಇದನ್ನೂ ಓದಿ : 👇
ಮದುವೆ ಫೋಟೋ ತೆಗೆಯುತ್ತಿರುವಾಗ ಹೃದಯಾಘಾತ ; ಫೋಟೋಗ್ರಾಫರ್ ನಿಧನ – vishwanews24
ಬಳಿಕ ಮಡಿಕೇರಿ, ಗೋಣಿಕೊಪ್ಪ, ಉಡುಪಿ, ಬೆಳ್ತಂಗಡಿ ಪ್ರಸ್ತುತ ಪಾಂಡೇಶ್ವರ ಅಗ್ನಿಶಾಮಕ ರಾಣೆಯಲ್ಲಿ ಕರ್ತವ್ಯವದನ್ನು ನಿರ್ವಹಿಸುತ್ತಿದ್ದು, ಇವರು 18ವರ್ಷಗಳ ಸೇವೆಯನ್ನು ಗುರುತಿಸಿ ಅನೇಕ ನಗದು ಬಹುಮಾನಗಳು ಲಭಿಸಿದೆ. ಇವರ ದಕ್ಷ ಮತ್ತು ಪ್ರಮಾಣಿಕ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದಪದಕ ಲಭಿಸಿದೆ.
