ರಾಜ್ಯಸಭೆಗೆ ನಾಮನಿರ್ದೇಶನ : ನನಗೆ ಮೋದಿಯವರು ದೇಶಸೇವೆಯ ಅವಕಾಶ ಕೊಟ್ಟಿದ್ದಾರೆ : ಡಾ. ವಿರೇಂದ್ರ ಹೆಗ್ಗಡೆ ಸಂತಸ – Vishwanews24
ರಾಜ್ಯಸಭೆಗೆ ನಾಮನಿರ್ದೇಶನ : ನನಗೆ ಮೋದಿಯವರು ದೇಶಸೇವೆಯ ಅವಕಾಶ ಕೊಟ್ಟಿದ್ದಾರೆ : ಡಾ. ವಿರೇಂದ್ರ ಹೆಗ್ಗಡೆ ಸಂತಸ
ಮಂಗಳೂರು: ತಮ್ಮನ್ನು ರಾಜ್ಯ ಸಭೆಗೆ ನಾಮನಿರ್ದೇಶನಗೊಳಿಸಿದ ಬಗ್ಗೆ ಡಾ.ಡಿ. ವಿರೇಂದ್ರ ಹೆಗ್ಗಡೆ ಪ್ರತಿಕ್ರಿಯಿಸಿದ್ದು, ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ, ರಾಜ್ಯ ಸಭೆ ಅಂದರೆ ಹಿರಿಯರ ವೇದಿಕೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಅನುಭವ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.
ರಾಜ್ಯಸಭೆ ನಾಮನಿರ್ದೇಶನದ ಮೂಲಕ ನನಗೆ ಮೋದಿಯವರು ದೇಶಸೇವೆಯ ಅವಕಾಶ ಕೊಟ್ಟಿದ್ದಾರೆ.
ಇದು ನಾಮನಿರ್ದೇಶನವಾದ ಕಾರಣ ಇದರಲ್ಲಿ ಯಾವುದೇ ಉತ್ಸಾಹದ ರಾಜಕಾರಣ ಇಲ್ಲ. ನನ್ನ ಜೊತೆಗೆ ಬೇರೆ ಕ್ಷೇತ್ರದ ಪ್ರಖ್ಯಾತ ವ್ಯಕ್ತಿಗಳನ್ನ ಕೂಡ ಗುರುತಿಸಲಾಗಿದೆ.
ನಾವು ಗ್ರಾಮೀಣಾಭಿವೃದ್ಧಿ ಯೋಜನೆ ಮಾಡಿದ್ದೇವೆ, ಇದನ್ನು ಇತರ ರಾಜ್ಯಗಳಿಗೂ ವಿಸ್ತರಣೆ ಮಾಡಬಹುದು. ದೇಗುಲ ಜೀರ್ಣೋದ್ಧಾರ, ಧಾರ್ಮಿಕ ಕ್ಷೇತ್ರದ ಶುದ್ಧತೆ, ಪಾವಿತ್ರ್ಯತೆ ರಕ್ಷಣೆ ಇತ್ಯಾದಿ ವಿಚಾರಗಳನ್ನು ಮಾಡುವ ಅವಕಾಶವಿದೆ ಎಂದಿದ್ದಾರೆ.
