ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್‌ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ – vishwanews24

Featured, ಉಡುಪಿ

ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್‌ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ

ಮಣಿಪಾಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ, ಬೀದಿ ದೀಪಗಳು, ಹೈ ಮಾಸ್ ದೀಪ ಹಾಗೂ ಮಾರ್ಗದ ಚರಂಡಿಯ ಇಕ್ಕೆಲಗಳಲ್ಲಿ ಬೇಲಿ ಅಳವಡಿಕೆ ರಾ.ಹೆ. ಪ್ರಾಧಿಕಾರ ಹಾಗೂ ಗುತ್ತಿಗೆದಾರರ ಜವಾಬ್ದಾರಿ. ರಸ್ತೆ ಅಪಘಾತ ತಪ್ಪಿಸಲು ಬ್ಲ್ಯಾಕ್ ಸ್ಪಾಟ್‌ಗಳನ್ನು ಸರಿಪಡಿಸಿ, ಅಗತ್ಯವಿರುವೆಡೆ ಬೇಲಿ ಅಳವಡಿಸಿ, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ ನೀಡುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾ.ಹೆ. -66ರ ಸಂಬಂಧಿಸಿ ಕೋಟ, ತೆಕ್ಕಟ್ಟೆ, ಪಡುಬಿದ್ರಿ, ಬ್ರಹ್ಮಾವರ ಜಂಕ್ಷನ್ ಮುಂತಾದ ಸ್ಥಳಗಳಲ್ಲಿ ಸರಣಿ ಅಪಘಾತಗಳು ನಡೆಯುತ್ತಿರುವ ಬಗ್ಗೆ ಚರ್ಚಿಸಲು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿರ್ವ: ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ  ಧ್ವಜಮರ ಸಮರ್ಪಣೆ – vishwanews24

ರಸ್ತೆ ಅಭಿವೃದ್ಧಿ ಸಂಬಂಧಿಸಿ ರಾ. ಹೆ. ಪ್ರಾಧಿಕಾರದವರು ಏನೂ ಮಾಡುತ್ತಿಲ್ಲ. ಅಪಘಾತ ನಡೆದಲ್ಲಿ ಟೋಲ್ ಸಂಗ್ರಹಿ ಸುವ ಗುತ್ತಿಗೆ ಸಂಸ್ಥೆಯೇ ಆ್ಯಂಬುಲೆನ್ಸ್ ಪೂರೈಸಬೇಕು, ಅಗತ್ಯವಿದ್ದರೆ ಕ್ರೇನ್ ಕೂಡ ತರಬೇಕು. ಆದರೆ ಈ ಸಂಸ್ಥೆಯಿಂದ ಯಾವ ಸೇವೆಯೂ ದೊರೆಯುತ್ತಿಲ್ಲ ಎಂದು ದೂರಿದ ಅವರು, ಒಂದು ವಾರದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಸಹಿತ ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬೆಂಗಳೂರಿನ ಆರ್.ಒ. ಜತೆ ಸಭೆ ನಡೆಸಲಾಗುವುದು ಎಂದರು.

ಹೆದ್ದಾರಿಯಲ್ಲಿ ನಿರ್ವಹಣೆ ಕೊರತೆ ಯಿಂದ ಅಪಘಾತ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳ ಲಾಗುವುದು. ಜಿಲ್ಲೆಯಲ್ಲಿ ಹೊಸದಾಗಿ 22 ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದ್ದು, ಈ ಸ್ಥಳಗಳು ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ದಾರಿದೀಪ, ಸೂಚನಾ ಫಲಕ, ಬ್ಯಾರಿಕೇಡ್, ಬ್ಲಿಂಕ್ಸ್ ಅಳವಡಿಕೆ ಮತ್ತಿತರ ವೈಜ್ಞಾನಿಕ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಬೇಕು. ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಎನ್‌ಎಚ್‌ಐ ಕಚೇರಿ ಮುಂದೆ ಸಾರ್ವಜನಿಕರ ಜತೆ ಧರಣಿ ನಡೆಸಬೇಕಾದೀತು ಎಂದರು.

ಕುಂದಾಪುರ: ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿ; ಇಬ್ಬರಿಗೆ ಗಾಯ, ಮೂವರ ಬಂಧನ – vishwanews24

ರಿಯಾಯಿತಿ ಪಾಸ್ ನೀಡಿ
ರಾ.ಹೆ. ಟೋಲ್ ಪ್ಲಾಜಾಗಳ 20 ಕಿ.ಮೀ. ವ್ಯಾಪ್ತಿ ಒಳಗಿನವರಿಗೆ ನ.1ರಿಂದ ರಿಯಾಯತಿ ಪಾಸ್ ನೀಡುವ ಕುರಿತು ಪ್ರಾಧಿಕಾರ ಹಾಗೂ ಗುತ್ತಿಗೆ ದಾರರು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಸಂಸದರು ಹೇಳಿದರು.

ಕೇರಳ ಮಾದರಿ ರಸ್ತೆಗೆ ಸರ್ವೆ
ಕೇರಳ ಮಾದರಿ ರೀತಿಯಲ್ಲಿಯೇ ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಡಿ.ಪಿ.ಆರ್ ಆಗುತ್ತಿದ್ದು, ಧ್ರುವ ಸಂಸ್ಥೆಯಿಂದ ಸರ್ವೆ ನಡೆಯುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಾತ್ಯಕ್ಷಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು. 10 ತಿಂಗಳಲ್ಲಿ 94 ಸಾವು
ಜಿಲ್ಲೆಯ ಹೆದ್ದಾರಿಯಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ನಡೆದ 297 ಅಪಘಾತ ಪ್ರಕರಣದಲ್ಲಿ 94 ಮಂದಿ ಸಾವನ್ನಪ್ಪಿದ್ದಾರೆ. 359 ಸಾಧಾರಣ ಹಾಗೂ ಗಂಭೀರ ಗಾಯಗೊಂಡಿದ್ದಾರೆ.

ಮೊಸರಿನ ದರ ಲೀಟರ್‌ಗೆ 14 ರೂ. ಹೆಚ್ಚಳ; ನ.1 ರಿಂದ ಜಾರಿಗೆ :  ಕೆಎಂಎಫ್ ಆದೇಶ – vishwanews24

Leave a Reply