ಸಂಬಂಧಿಕರನ್ನು ಬೀಳ್ಕೊಡಲು ಬಂದ 12 ಮಂದಿ ವಂದೇ ಭಾರತ್‌ ರೈಲಲ್ಲಿ ಲಾಕ್‌ ; 36 ಸಾವಿರ ದಂಡ – vishwanews24

Featured, ರಾಷ್ಟ್ರ ನ್ಯೂಸ್

ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ

ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಿನೊಳಗೆ ಲಾಕ್

140 ಕಿ.ಮೀ ದೂರ ಪ್ರಯಾಣಿಸಿದ ಸಂಬಂಧಿಕರು

ರೈಲ್ವೆ ಅಧಿಕಾರಿಗಳಿಂದ ವಿಚಾರಣೆ, 36 ಸಾವಿರ ರೂ. ದಂಡ 

ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಲ್ಲೇ ಲಾಕ್ ಆಗಿ 140 ಕಿಮೀ ರೈಲಲ್ಲೇ ಅವರೆಲ್ಲ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು 36,000 ರೂ. ದಂಡ ವಿಧಿಸಿದ್ದಾರೆ.

ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರುವುದರಿಂದ 12 ಮಂದಿ 140 ಕಿಮೀ ರೈಲಲ್ಲೇ ಪ್ರಯಾಣಿಸಿದ್ದಾರೆ. ಬಳಿಕ ಅವರನ್ನೆಲ್ಲಾ ಎಟಾವಾ ಜಂಕ್ಷನ್‌ನಲ್ಲಿ ರೈಲಿನಿಂದ ಇಳಿಸಲಾಯಿತು. ಬಳಿಕ ಅಧಿಕಾರಿಗಳು ರೈಲು ಏರಿದ್ದ ಪ್ರತಿಯೊಬ್ಬರಿಗೂ ತಲಾ 3,000 ರೂ.ನಂತೆ 36,000 ರೂ. ದಂಡ ವಿಧಿಸಿರುತ್ತಾರೆ.

ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು -vishwanews24

ವಾರಣಾಸಿಯಿಂದ ನವದೆಹಲಿ ಈ ವಂದೇ ಭಾರತ್ ರೈಲು ತೆರಳುತ್ತಿತ್ತು. ಈ ರೈಲಿಗೆ ಕಾನ್ಪುರದ ವಿವಿಧ ಭಾಗಗಳಿಂದ ಬಂದಿದ್ದ 12 ಮಂದಿ, ತಮ್ಮ ಸಂಬಂಧಿಕರನ್ನು ರೈಲಿಗೆ ಹತ್ತಿಸಲು, ರೈಲು ಪ್ರವೇಶಿಸಿದ್ದರು. ಈ ವೇಳೆ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡು ರೈಲು ಸಂಚಾರ ಆರಂಭಿಸಿತ್ತು.

ರೈಲು ಹೊರಡುತ್ತಿದ್ದಂತೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಕುಟುಂಬಸ್ಥರು ಹಾಗೂ ರೈಲು ಏರಿದ್ದವರು ಆತಂಕಕ್ಕೊಳಗಾಗಿದ್ದಾರೆ. ಅವರೆಲ್ಲಾ ಅವರೆಲ್ಲಾ ಸಿಬ್ಬಂದಿ ಬಳಿ ರೈಲಿನ ಬಾಗಿಲು ತೆಗೆಯುವಂತೆ ಮನವಿ ಮಾಡಿದ್ದಾರೆ. ಆದರೆ ರೈಲು ಚಲನೆಯಲ್ಲಿರುವಾಗ ಮತ್ತು ತಾಂತ್ರಿಕ ಕಾರಣಗಳಿಂದ ರೈಲಿನ ಬಾಗಿಲನ್ನು ಸಿಬ್ಬಂದಿ ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಣಿಪಾಲದಲ್ಲಿ ಬೈಕ್ ಕಳವು ಪ್ರಕರಣ: ಆರೋಪಿ ಬಂಧನ – vishwanews24

ಬಳಿಕ ನಿಯಂತ್ರಣ ಕೊಠಡಿಯಿಂದ ಬಂದ ಸೂಚನೆಯಂತೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಎಟವಾ ಜಂಕ್ಷನ್‌ನಲ್ಲಿ ನಿಲ್ಲಿಸಲಾಯಿತು. ಬಳಿಕ 12 ಮಂದಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಟಿಕೆಟ್ ಪಡೆಯದೇ ರೈಲಿಗೆ ಪ್ರವೇಶಿಸಿದ ಮತ್ತು ರೈಲ್ವೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಎಲ್ಲರಿಗೂ ಸೇರಿ 36,000 ರೂ. ದಂಡ ವಿಧಿಸಲಾಯಿತು ಎಂದು ತಿಳಿದುಬಂದಿದೆ.

Leave a Reply