ಅತಿಥಿ ಉಪನ್ಯಾಸಕರಿಗೆ ಒಂದೆರೆಡು ದಿನಗಳಲ್ಲಿ ಸಿಹಿಸುದ್ದಿ ಬರಲಿದೆ :  ಅಶ್ವತ್ಥ ನಾರಾಯಣ – Vishwanews24

Featured, ರಾಜ್ಯ ನ್ಯೂಸ್

ಅತಿಥಿ ಉಪನ್ಯಾಸಕರಿಗೆ ಒಂದೆರೆಡು ದಿನಗಳಲ್ಲಿ ಸಿಹಿಸುದ್ದಿ ಬರಲಿದೆ :  ಅಶ್ವತ್ಥ ನಾರಾಯಣ – Vishwanews24

ಬೆಂಗಳೂರು : ಕಳೆದ ಒಂದು ತಿಂಗಳಿನಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಒಂದೆರೆಡು ದಿನಗಳಲ್ಲಿ ಸಿಹಿಸುದ್ದಿ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಕುರಿತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಚೇರಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಂಗಳವಾರ ನಡೆದ ಮೂರು ತಾಸುಗಳ ಸಭೆಯ ಬಳಿಕ ಅವರು ಈ ಭರವಸೆ ನೀಡಿದರು.

ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತ್ಯೇಕವಾಸದಲ್ಲಿದ್ದಾರೆ. ಅವರ ಜತೆ ಮತ್ತೊಮ್ಮೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು. ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥದಲ್ಲಿ ಆರ್ಥಿಕ ಹೊರೆ ಮತ್ತಿತರ ಅಂಶಗಳಿವೆ. ಒಟ್ಟಿನಲ್ಲಿ ವಿಷಯವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದರು

ಉಡುಪಿ:ಯಾತ್ರಾರ್ಥಿಗಳಿದ್ದ ಬಸ್‌ ಪಲ್ಟಿ : ಹಲವರಿಗೆ ಗಾಯ – Vishwanews24

Leave a Reply