ಉಡುಪಿ:ಯಾತ್ರಾರ್ಥಿಗಳಿದ್ದ ಬಸ್‌ ಪಲ್ಟಿ : ಹಲವರಿಗೆ ಗಾಯ – Vishwanews24

Featured, ಉಡುಪಿ

ಉಡುಪಿ:ಯಾತ್ರಾರ್ಥಿಗಳಿದ್ದ ಬಸ್‌ ಪಲ್ಟಿ : ಹಲವರಿಗೆ ಗಾಯ – Vishwanews24

ಉಡುಪಿ: ಯಾತ್ರಾರ್ಥಿಗಳಿದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಬೈಂದೂರು ತಾಲೂಕಿನ ಕೊಲ್ಲೂರಿನ ದಳಿ ಸಮೀಪ ನಡೆದಿದೆ.

ಕೊಲ್ಲೂರು ಸಮೀಪದ ದಳಿ ತಿರುವಿನ ಬಳಿ ಈ ಘಟನೆ ನಡೆದಿದೆ. ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಕುಂದಾಪುರ ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಕೊಲ್ಲೂರು ಪೋಲಿಸರು ಭೇಟಿ ನೀಡಿದ್ದು, ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ : ವೀಕೆಂಡ್ ಕರ್ಫ್ಯೂ ತಿಂಗಳಾಂತ್ಯದವರೆಗೆ ವಿಸ್ತರಣೆ – Vishwanews24

Leave a Reply