ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ! ಓದಿ ಈ ವರದಿ – Vishwanews24

Featured, ರಾಷ್ಟ್ರ ನ್ಯೂಸ್

ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ! 

ಶಿಕ್ಷಕಿಗೆ 21 ಲಕ್ಷ ಪಂಗನಾಮ ಹಾಕಿದ ‘ ಸೈಬರ್ ಕಳ್ಳರು ..

ಹಣ ಕಳೆದುಕೊಂಡಿದ್ದು ಹೇಗೆ? ಓದಿ ಈ ವರದಿ..

ಅಮರಾವತಿ: ಅಪರಿಚಿತ ನಂಬರ್‌ನಿಂದ ಬಂದ ವಾಟ್ಸಾಪ್ ಮೆಸೇಜ್‌ನಿಂದ ಶಿಕ್ಷಿಯೊಬ್ಬರು 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈಲ್ಲಿನ ಅನ್ನಮಯ್ಯ ಜಿಲ್ಲೆಯ ನಿವಾಸಿಯಾಗಿರುವ ಶಿಕ್ಷಕಿ ವರಲಕ್ಷಿ ಅವರೇ 21 ಲಕ್ಷ ಕಳೆದುಕೊಂಡಿರುವವರು. ತನ್ನ ಮೊಬೈಲ್‌ಗೆ ಬಂದ ಒಂದೇ ಒಂದು ವಾಟ್ಸಾಪ್ ಲಿಂಕ್ ಸಂದೇಶದಿಂದ ಹಣ ಕಳೆದುಕೊಂಡು ಬಳಿಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ! –  Public TV

ಹಣ ಕಳೆದುಕೊಂಡಿದ್ದು ಹೇಗೆ?
ಅಪರಿಚಿತ ಮೊಬೈಲ್ ಸಂಖ್ಯೆಯಿಂದ ತನ್ನ ವಾಟ್ಸಾಪ್‌ಗೆ ಲಿಂಕ್‌ನೊಂದಿಗೆ ಮೆಸೇಜ್ ಬಂದಿದೆ. ಹಲವು ಬಾರಿ ಸಂದೇಶಗಳನ್ನು ಸ್ವೀಕರಿಸಿದ್ದಾರೆ, ಅಂದಿನಿಂದಲೇ ಆಕೆಯ ಫೋನ್ ಹ್ಯಾಕ್ ಆಗಿದೆ. ವರಲಕ್ಷ್ಮೀ ಅವರು ಲಿಂಕ್ ಕ್ಲಿಕ್ ಮಾಡಿದ ಬಳಿಕ ಫೋನ್ ಸಂಪೂರ್ಣ ಹ್ಯಾಕ್ ಆಗಿದ್ದು, ಸೈಬರ್ ಕಿರಾತಕರು ಈಕೆಯ ಖಾತೆಯಿಂದಲೇ ವಹಿವಾಟು ನಡೆಸಿದ್ದಾರೆ. 20,000, 40,000 ಮತ್ತು 80,000 ದಂತೆ ಖಾತೆಯಿಂದ ಹಣ ಕಡಿಗೊಳ್ಳುತ್ತಾ ಹೋಗಿದೆ. ಹೀಗೆ ಒಟ್ಟು 21 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. ಅಲ್ಲದೇ ಮದನಪಲ್ಲಿಯ ಉದ್ಯೋಗಿ ಜ್ಞಾನ ಪ್ರಕಾಶ್ ಅವರಿಂದಲೂ 12 ಲಕ್ಷ ರೂಪಾಯಿ ಸೈಬರ್ ಕಳ್ಳರ ಪಾಲಾಗಿದೆ.

ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ! –  Public TV

ಈ ಸಂಬಂಧ ವರಲಕ್ಷ್ಮೀ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

3.30 ಲಕ್ಷ ಅಕ್ರಮ ಬಿಪಿಎಲ್‌ ಕಾರ್ಡ್‌ ರದ್ದು.. ಹೊಸದಾಗಿ 2.70 ಲಕ್ಷ ಕಾರ್ಡ್‌ ಹಂಚಿಕೆ : ಉಮೇಶ್‌ ಕತ್ತಿ – Vishwanews24

Leave a Reply