3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ರದ್ದು: ಹೊಸದಾಗಿ 2.70 ಲಕ್ಷ ಕಾರ್ಡ್ ಹಂಚಿಕೆ : ಉಮೇಶ್ ಕತ್ತಿ – Vishwanews24
3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ರದ್ದು: ಹೊಸದಾಗಿ 2.70 ಲಕ್ಷ ಕಾರ್ಡ್ ಹಂಚಿಕೆ : ಉಮೇಶ್
ಕತ್ತಿ
ಬೆಂಗಳೂರು: ರಾಜ್ಯದಲ್ಲಿ 3.30 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ರದ್ದುಪಡಿಸಿದ ಅಕ್ರಮ ಬಿಪಿಎಲ್ ಕಾರ್ಡ್‌ಗಳಲ್ಲಿ 85 ಸಾವಿರ ಆದಾಯ ತೆರಿಗೆ ಪಾವತಿದಾರರದು ಮತ್ತು 22 ಸಾವಿರ ಸರಕಾರಿ ನೌಕರರದು ಎಂದು ಸುದ್ದಿಗಾರ ರಿಗೆ ಅವರು ತಿಳಿಸಿದ್ದಾರೆ.
ರದ್ದುಪಡಿಸಿದ ಅಕ್ರಮ ಬಿಪಿಎಲ್ ಕಾರ್ಡ್‌ಗಳಲ್ಲಿ 85 ಸಾವಿರ ಆದಾಯ ತೆರಿಗೆ ಪಾವತಿದಾರರದು ಮತ್ತು 22 ಸಾವಿರ ಸರಕಾರಿ ನೌಕರರದು ಎಂದು ಸುದ್ದಿಗಾರ ರಿಗೆ ಅವರು ತಿಳಿಸಿದ್ದಾರೆ. 2.70 ಲಕ್ಷ ಕಾರ್ಡ್ ಹೊಸದಾಗಿ ನೀಡುತ್ತಿದ್ದೇವೆ. ಇನ್ನೂ 1.50 ಲಕ್ಷ ಮಂದಿ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಕೊರೊನಾ ಸಂದರ್ಭ ಆರಂಭಿಸಲಾದ ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಅಕ್ಕಿ ಉಚಿತ ವಿತರಣೆ ಸಪ್ಟೆಂಬರ್‌ನಿಂದ ಸ್ಥಗಿತ ಗೊಳ್ಳಲಿದೆ. ಸಬ್ಸಿಡಿ ಕಡಿತ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಭಿ ಪ್ರಾಯವನ್ನು ಕೇಂದ್ರ ಸರಕಾರ ಒಪ್ಪಿ ರಾಜ್ಯಗಳಿಗೆ ನಿರ್ದೇಶನ ನೀಡಿದರೆ ಅನ್ನಭಾಗ್ಯ, ಉಚಿತ ವಿದ್ಯುತ್ ಮತ್ತಿತರ ಯೋಜನೆಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸಚಿವರು ತಿಳಿಸಿದ್ದಾರೆ.
ಮುಲ್ಕಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಆ.28ರಂದು ಬೃಹತ್ ಬೈಕ್ ಜಾಥಾ : ಮಿಥುನ್ ರೈ – Vishwanews24
