ಬಿಜೆಪಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಯಾವುದೇ ಗೊಂದಲಗಳನ್ನು ಪಕ್ಷದ ಮುಖಂಡರು ಕುಳಿತು ಪರಿಹರಿಸಿದ್ದಾರೆ. ಈಗ ಪಕ್ಷಕ್ಕಾಗಿ ಅಭ್ಯರ್ಥಿಯ ಗೆಲುವಿಗೆ ಸಂಘಟಿತರಾಗಿ ಶ್ರಮಿಸಲಿದ್ದೇವೆ : ಸುರೇಶ್ ಶೆಟ್ಟಿ ಗುರ್ಮೆ

desha, ಉಡುಪಿ

ಕಾಪು : ಬಿಜೆಪಿ ಶಿಸ್ತಿನ ಪಕ್ಷ. ಪಕ್ಷದಲ್ಲಿ ಯಾವುದೇ ಗೊಂದಲಗಳಿದ್ದರೂ ಒಂದೇ ಮನೆಯ ಕುಟುಂಬದಂತೆ ಎಲ್ಲರೂ ಹಿರಿಯರು ಯಾವುದೇ ಗೊಂದಲಗಳಿದ್ದರೂ ಪರಿಹರಿಸಿಸುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಲಾಲಾಜಿ ಮೆಂಡನ್ ಅವರ ಗೆಲುವಿಗೆ ಎಲ್ಲರೂ ಹೋರಾಟ ನಡೆಸುತ್ತೇವೆ. ಸಾಮಾಜಿಕ ನ್ಯಾಯದಂತೆ ಪಕ್ಷದಲ್ಲಿ ಓರ್ವ ಮೊಗವೀರ ಸಮುದಾಯಕ್ಕೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಲಾಲಾಜಿ ಮೆಂಡನ್ ಅವರಿಗೆ ನೀಡಲಾಗಿದೆ ಎಂದ ಕಾಪು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದರು 

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂತ್ರದಂತೆ 10 ಮನೆಗಳಿಗೆ ಒಬ್ಬ ಕಾರ್ಯಕರ್ತನನ್ನು ಆಯ್ಕೆ ಮಾಡಲಾಗುವುದು. ಈ ಸೂತ್ರವು ಈಶಾನ್ಯ ರಾಜ್ಯಗಳಲ್ಲಿ ಯಶಸ್ವಿಯಾಗಿದ್ದು, ಇಲ್ಲೂ ಅದೇ ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು. ಈ ಮೂಲಕ ಚುನಾವಣೆಗೆ ರಣತಂತ್ರ ರೂಪಿಸಲಾಗಿದೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ ಎಂದರು.
ಒಂದು ಮನೆಯಲ್ಲಿದ್ದಾಗ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡಿದ್ದಾರೆ. ಪಕ್ಷ ಬಿಡುವುದಿಲ್ಲ. ಬೆಂಬಲಿಗರ ಮನವೊಲಿಸಲಾಗಿದೆ ಎಂದೂ ಗುರ್ಮೆ ಹೇಳಿದ್ದಾರೆ.

ಪಕ್ಷದ ಅಭ್ಯರ್ಥಿ ಲಾಲಾಜಿ ಮೆಂಡನ್ ಮಾತನಾಡಿ, ಪಕ್ಷದ ಮುಖಂಡರು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆ ಜನೆತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಈಗಾಗಲೇ ಪೂರ್ವ ತಯಾರಿ ಸಭೆಗಳು ನಡೆದಿವೆ. ಜಿಲ್ಲೆಗೆ ನರೇಂದ್ರ ಮೋದಿ ಸಹಿತ ವಿವಿಧ ರಾಷ್ಟ್ರೀಯ ಚುನಾವಣಾ ಪ್ರಚಾರಕರು ಆಗಮಿಸಲಿದ್ದಾರೆ. ಕಾಪುವಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದ ಅವರು ಈ ಭಾರಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.
ಕಾಪು ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಟಪಾಡಿ ಶಂಕರ ಪೂಜಾರಿ, ಜಿತೇಂದ್ರ ಶೆಟ್ಟಿ ಉದ್ಯಾವರ, ಶಿಲ್ಪಾ ಸುವರ್ಣ, ಗಂಗಾಧರ ಸುವರ್ಣ, ಕೇಸರಿ ಯು., ಚಂದ್ರ ಮಲ್ಲಾರು ಉಪಸ್ಥಿತರಿದ್ದರು.