ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

Featured, ರಾಜ್ಯ ನ್ಯೂಸ್

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ ಘಟನೆ ವಿಶ್ವದಾದ್ಯಂತ ಇರೋ ರಾಮಭಕ್ತರಿಗೆ ಆಘಾತ ತಂದಿದೆ. ಈ ಲೂಟಿ ಕೂಡ ದೊಡ್ಡ ಎಚ್ಚರಿಕೆ ಗಂಟೆ. ಈ ಕೃತ್ಯದಲ್ಲಿ ಯಾರೇ ಇದ್ದರೂ ಉಗ್ರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರ್ ಧ್ವಂಸ ಮಾಡಿದ ಜಾಗದಲ್ಲಿ ಅಯೋಧ್ಯೆಯ ಭವ್ಯವಾದ ರಾಮಮಂದಿರ ಕಟ್ಟಲಾಗಿದೆ. ಸರ್ಕಾರದ ಹಣವಿಲ್ಲದೇ, ಭಕ್ತರ ಹಣದಿಂದ ರಾಮಮಂದಿರ ಕಟ್ಟಲಾಯಿತು. ಈಗ ಕಳೆದ 6 ತಿಂಗಳ ಹಿಂದೆ ದೇವಾಲಯದ ಸಿಸಿಟಿವಿ ಹಾಳು ಮಾಡಿ 200 ಬೆಳ್ಳಿಯ ಇಟ್ಟಿಗೆ, ಬಂಗಾರದ ಆಭರಣಗಳನ್ನು ದೋಚಿರುವುದು ಆಶ್ಚರ್ಯ ಮತ್ತು ನೋವು ತಂದಿದೆ ಎಂದರು.

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ರಾಮಮಂದಿರವನ್ನು ಕಟ್ಟುವುದನ್ನು ವಿರೋಧಿಸುತ್ತಿರುವ ಕೂಗು ಈಗ ಜೋರಾಗಿದೆ. ಈ ವಿಚಾರವನ್ನು ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಮಧ್ಯೆ ತಂದು ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಅಲ್ಲಿ ಆಡಳಿತ ಮಂಡಳಿಯು ಜವಬ್ದಾರಿ ತೆಗೆದುಕೊಂಡು ಇದನ್ನು ಬೇಧಿಸಬೇಕಿದೆ. ಇಲ್ಲದಿದ್ದರೆ ಪುಣ್ಯ ಕ್ಷೇತ್ರದ ಬಗ್ಗೆ ಇರುವ ಗೌರವ ಕಡಿಮೆ ಆಗಲಿದೆ. ಈ ಪ್ರಕರಣದಲ್ಲಿ ಅಯೋಧ್ಯೆಯ ದೇವಾಲಯದ ಟ್ರಸ್ಟಿಗಳೇ ಇದ್ದರೂ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಟೀಕಾಕಾರರಿಗೆ ಈ ಮೂಲಕ ಉತ್ತರ ನೀಡಲಿ ಎಂದರು.

ಹಲವಾರು ಜನರು ಈ ಘಟನೆ ಬಗ್ಗೆ ಈಗ ಬಹಳ ಟೀಕೆ ಮೂಲಕ ಮಾತನಾಡುತ್ತಿದ್ದಾರೆ. ಕುಟುಂಬದಲ್ಲಿ ಯಾರೋ ಒಬ್ಬ ಕಳ್ಳ ಇದ್ದ ಕೂಡಲೇ ಇಡೀ ಕುಟುಂಬ ಕಳ್ಳತನ ಮಾಡಿದೆ ಎಂದಲ್ಲ. ಯಾರು ಅಲ್ಲಿ ಕಳ್ಳತನ ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು – vishwanews24

Leave a Reply