ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ ‘ಅರ್ನಬ್’ ಚಂಡಮಾರುತ …-vishwanews24
ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ ‘ಅರ್ನಬ್’ ಚಂಡಮಾರುತ …
ಪ್ರತಿ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ
ಆಂಧ್ರಪ್ರದೇಶ, ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ
ಭುವನೇಶ್ವರ: ಬುಧವಾರ ಬೆಳಗ್ಗೆ ಅತ್ಯಂತ ಬಿರುಸಿನ ‘ಅರ್ನಬ್’ ಚಂಡಮಾರುತ ಆಂಧ್ರಪ್ರದೇಶ ಕರಾವಳಿಯನ್ನು ಅಪ್ಪಳಿಸಿದೆ. ಚಂಡ ಮಾರುತದ ತೀವ್ರತೆ ಇನ್ನೂ ಎರಡು ಗಂಟೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಯನಂಗೆ ಸಮೀಪವಿರುವ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವಿನ ಆಂಧ್ರಪ್ರದೇಶ ಕರಾವಳಿಗೆ ಈ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತ ಪ್ರತಿ ಗಂಟೆಗೆ 125-135 ಕಿಮೀ ತೀವ್ರತೆಯಲ್ಲಿ ಪ್ರಾರಂಭಗೊಂಡು, ಪ್ರತಿ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸಲಿದೆ.
ಬುಧವಾರ (ಅಕ್ಟೋಬರ್ 28) ಮುಂಜಾನೆ ಸುಮಾರು 1.20ರ ಸುಮಾರಿಗೆ ಈ ಚಂಡಮಾರುತ ಆಂಧ್ರಪ್ರದೇಶ ಕರಾವಳಿಯನ್ನು ಪ್ರವೇಶಿಸಿದೆ.
ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರ ಪ್ರದೇಶ, ಯನಂ ಮತ್ತು ಒಡಿಶಾದ ಕೆಲ ಭಾಗಗಳಲ್ಲಿ ಭಾರಿ ಮಳೆ ಹಾಗೂ ಪ್ರಬಲ ಗಾಳಿ ಬೀಸುವುದು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನರ್ಸಾಪುರದಿಂದ ಸುಮಾರು 20 ಕಿಮೀ, ದಕ್ಷಿಣ-ನೈರುತ್ಯ ಯನಂನಿಂದ ಸುಮಾರು 40 ಕಿಮೀ, ದಕ್ಷಿಣ-ನೈರುತ್ಯ ಕಾಕಿನಾಡದಿಂದ 60 ಕಿಮೀ ಹಾಗೂ ಪೂರ್ವ-ಈಶಾನ್ಯ ಮಚಲಿಪಟ್ಟಣಂನಿಂದ ಸುಮಾರು 90 ಕಿಮೀ ದೂರದಲ್ಲಿ ಈ ಚಂಡಮಾರುತ ಕೇಂದ್ರೀಕೃತಗೊಂಡಿದೆ.
