ಆ. 10 ರಿಂದ 16 ರವರೆಗೆ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ – Vishwanews24

Featured, ರಾಜ್ಯ ನ್ಯೂಸ್

ಆ. 10 ರಿಂದ 16 ರವರೆಗೆ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ರಾಯಚೂರು: ಪ್ರತಿವರ್ಷ ಶ್ರಾವಣಮಾಸದಲ್ಲಿ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವವು ಸಂಭ್ರಮ, ಸಡಗರದಿಂದ ನೆರವೇರುತ್ತಾ ಬಂದಿದೆ. ಈ ಸಲ ಇದೇ ಆಗಸ್ಟ್‌ 10 ರಿಂದ 16 ರವರೆಗೂ ರಾಯರ ಆರಾಧನಾ ಮಹೋತ್ಸವವನ್ನು ಸಂಭ್ರಮದಿಂದ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಮನುಕುಲವನ್ನು ಕಾಡಿದ ಕೊರೊನಾ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ರಾಯರ ಆರಾಧನೆ ನಡೆದಿತ್ತು. ಈ ಸಲ ಕೋವಿಡ್‌ ಪೂರ್ವದ ಸಂಭ್ರಮ ಮರುಕಳಿಸಲಿದ್ದು, ಬೇರೆ ಬೇರೆ ದೇಶ ಗಳಿಂದ ಮತ್ತು ರಾಜ್ಯದ ಮೂಲೆ ಮೂಲೆಗಳಿಂದಲೂ ಅಪಾರ ಪ್ರಮಾಣದ ಭಕ್ತರು ಭಾಗ ವಹಿಸುವ ನಿರೀಕ್ಷೆ ಇದೆ ಎಂದು ತಿಳಿ ಸಿದರು. ಭಕ್ತರು ಪುಣ್ಯಸ್ನಾನ ಮಾಡುವುದಕ್ಕೆ ತುಂಗಭದ್ರಾ ನದಿಯಲ್ಲಿ ನೀರಿದೆ. ಜಲಾಶಯದಿಂದ ನಿರಂತರ ನೀರು ಹರಿದುಬರುತ್ತಿದ್ದು, ಪ್ರವಾಹ ಭೀತಿಯಿಲ್ಲ. ಭಕ್ತರೆಲ್ಲರೂ ನಿರ್ಭಿತಿಯಿಂದ ಆರಾಧನೆಯಲ್ಲಿ ಪಾಲ್ಗೊಳ್ಳಬಹುದು. ನದಿ ಪಕ್ಕದಲ್ಲಿ ಭಕ್ತರು ಸ್ನಾನ ಮಾಡುವುದಕ್ಕಾಗಿ 100 ನೀರಿನ ಸಿಂಚನಗಳನ್ನು ಅಳವಡಿಸಲಾಗಿದೆ. ಭಕ್ತರು ನದಿಯಲ್ಲಿ ಇಳಿಯದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು. ಪ್ರತಿದಿನ ಯೋಗೀಂದ್ರ ಸಭಾಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಯರ ಅನುಗ್ರಹ ಪ್ರಶಸ್ತಿಯನ್ನು ಆಗಸ್ಟ್‌ 12 ರಂದು ಪ್ರದಾನ ಮಾಡಲಾಗುವುದು. ಗ್ರಂಥಗಳ ಲೋಕಾರ್ಪಣೆ ಕೂಡಾ ನಡೆಯಲಿದೆ ಎಂದು ತಿಳಿಸಿದರು. ಪ್ರತಿವರ್ಷದಂತೆ ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ ಮಾಡಲಾಗುವುದು. ಆಗಸ್ಟ್‌ 14 ಉತ್ತಾರಾರಾಧನೆ ದಿನದಂದು ವಸಂತೋತ್ಸವ, ಮಹಾರಥೋತ್ಸವ ನೆರವೇರಲಿದೆ. ರಥೋತ್ಸವದ ಉದ್ದಕ್ಕೂ ವಾದ್ಯಮೇಳ ಹಾಗೂ ಕಲಾ ತಂಡಗಳು ಬಾಗವಹಿಸಲಿವೆ. ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಯನ್ನು ಭಕ್ತರು ಮಾಡುತ್ತಿದ್ದಾರೆ ಎಂದು ಹೇಳಿದರು.

ಕೋಡಿಮಠ ಶ್ರೀಗಳಿಂದ ರಾಜ್ಯ ರಾಜಕೀಯ, ಪ್ರಕೃತಿ ವಿಕೋಪದ ಬಗ್ಗೆ ಸ್ಪೋಟಕ ಭವಿಷ್ಯ – Vishwanews24

ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ, ಪ್ರಸಾದ, ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುತ್ತಿದೆ. ಮಂತ್ರಾಲಯದಲ್ಲಿ ವಿದ್ಯುತ್ ದೀಪಗಳಿಂದ ಬೀದಿಗಳ ಅಲಂಕಾರ ಹಾಗೂ ಸಂಚಾರ‌ ನಿಯಂತ್ರಣ ‌ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಒಂದು ತಪಾಸಣೆ ಕೇಂದ್ರ ಮತ್ತು ಮಠದ ಆಸ್ಪತ್ರೆಯು 24/7 ಸೇವೆ ಸಲ್ಲಿಸುವ ‌ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಆರಾಧನೆ ಸಂದರ್ಭದಲ್ಲಿ ಹೆಚ್ಚುವರಿ ಬಸ್ ಸೌಲಭ್ಯಕ್ಕಾಗಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಸರ್ಕಾರಗಳೊಂದಿಗೆ ಮಾತನಾಡಲಾಗಿದೆ ಎಂದರು. ಮಠದ ಆಡಳಿತದ ವ್ಯವಸ್ಥಾಪಕರಾದ ಎಸ್‌.ಕೆ.ಶ್ರೀನಿವಾಸ್‌ ಆಚಾರ್‌, ವೆಂಕಟೇಶ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಉಡುಪಿ : ಯುವಕರಿಗೆ ಸೇನಾಪಡೆ ಸೇರ್ಪಡೆಗೆ ತರಬೇತಿ – ಅರ್ಜಿ ಆಹ್ವಾನ – Vishwanews24

Leave a Reply