ಇತಿಹಾಸವು ಯಾವುದೇ ಸರ್ಕಾರ ರೈತರ ವಿರುದ್ಧ ಗೆದ್ದಿಲ್ಲ ಎಂದು ಹೇಳುತ್ತದೆ  : ನವಜೋತ್ ಸಿಂಗ್ ಸಿಧು -Vishwanews24

Featured, ರಾಷ್ಟ್ರ ನ್ಯೂಸ್

ಇತಿಹಾಸವು ಯಾವುದೇ ಸರ್ಕಾರ ರೈತರ ವಿರುದ್ಧ ಗೆದ್ದಿಲ್ಲ ಎಂದು ಹೇಳುತ್ತದೆ  : ನವಜೋತ್ ಸಿಂಗ್ ಸಿಧು -Vishwanews24

ನವದೆಹಲಿ : ಯಾವುದೇ ಸರ್ಕಾರ ರೈತರ ವಿರುದ್ಧ ಗೆದ್ದ ಇತಿಹಾಸವಿಲ್ಲ ಎಂದು ಪಂಜಾಬ್‌ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿದ್ದು ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಭಾರೀ ಸಂಘರ್ಷ ಉಂಟಾಗಿತ್ತು. ಹಲವಾರು ಮಂದಿ ಗಾಯಗೊಂಡಿದ್ದು ಈ ಬಗ್ಗೆ ಪೊಲೀಸರು 7 ಎಫ್‌ಐಆರ್‌ ದಾಖಲಿಸಿದ್ದಾರೆ. ಇನ್ನು ರೈತರ ಕೆಲ ಗುಂಪು ಭಾರತದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಆವರಣದಲ್ಲಿ ತಮ್ಮ ಸಂಘದ ಧ್ವಜವನ್ನು ಹಾರಿಸಿದ್ದರು.

ಪ್ರತಿ ತಾಲೂಕಿಗೆ ಒಂದರಂತೆ ಗೋಶಾಲೆ ಆರಂಭ :ಸಚಿವ ಪ್ರಭು ಚೌವ್ಹಾಣ್ -Vishwanews24

ಈ ಬಗ್ಗೆ ಟ್ವೀಟ್‌ ಮಾಡಿರುವ ನವಜೋತ್ ಸಿಂಗ್ ಸಿಧು, “ನೀವು ಇತಿಹಾಸದಿಂದ ಪಾಠ ಕಲಿಯದಿದ್ದರೆ, ಇತಿಹಾಸ ಪುನರಾವರ್ತನೆಯಾಗುತ್ತದೆ. ಇತಿಹಾಸವು ಯಾವುದೇ ಸರ್ಕಾರವು ರೈತರ ವಿರುದ್ಧ ಗೆದ್ದಿಲ್ಲ ಎಂದು ಹೇಳುತ್ತದೆ” ಎಂದಿದ್ದಾರೆ.