ಏಪ್ರಿಲ್ 1ರಿಂದ ಪಡಿತರದಾರರಿಗೆ ಅಕ್ಕಿ ಜೊತೆಗೆ ಜೋಳ, ತೊಗರಿ, ರಾಗಿ ವಿತರಣೆ -Vishwanews24

Featured, ರಾಜ್ಯ ನ್ಯೂಸ್

ಏಪ್ರಿಲ್ 1ರಿಂದ ಪಡಿತರದಾರರಿಗೆ ಅಕ್ಕಿ ಜೊತೆಗೆ ಜೋಳ, ತೊಗರಿ, ರಾಗಿ ವಿತರಣೆ -Vishwanews24

ಕಲಬುರ್ಗಿ : ಈಗಾಗಲೇ ರಾಜ್ಯದ ಪಡಿತರ ಚೀಟಿದಾರರಿಗೆ ಅನೇಕ ಸೌಲಭ್ಯ ನೀಡುತ್ತಿರುವಂತ ರಾಜ್ಯ ಸರ್ಕಾರ, ಈಗ ಮತ್ತೊಂದು ಹೊದ ಧಾನ್ಯಗಳ ವಿತರಣೆಗೆ ಸಿದ್ಧವಾಗಿದೆ. ಏಪ್ರಿಲ್ 1ರಿಂದ ಪಡಿತರದಾರರಿಗೆ ಜೋಳ, ತೊಗರಿ, ರಾಗಿ ವಿತರಿಸಲಿದೆ. ಈ ಮೂಲಕ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದೆ.

ಇತಿಹಾಸವು ಯಾವುದೇ ಸರ್ಕಾರ ರೈತರ ವಿರುದ್ಧ ಗೆದ್ದಿಲ್ಲ ಎಂದು ಹೇಳುತ್ತದೆ : ನವಜೋತ್ ಸಿಂಗ್ ಸಿಧು -Vishwanews24

ಈ ಕುರಿತಂತೆ ಮಾಹಿತಿ ನೀಡಿದಂತ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಜೋಳ, ತೊಗರಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಡಿತರದಾರರಿಗೆ ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್ 1ರಿಂದ ಪಡಿತರದಾರರಿಗೆ ಜೋಳ, ತೊಗರಿ, ರಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇತಿಹಾಸವು ಯಾವುದೇ ಸರ್ಕಾರ ರೈತರ ವಿರುದ್ಧ ಗೆದ್ದಿಲ್ಲ ಎಂದು ಹೇಳುತ್ತದೆ : ನವಜೋತ್ ಸಿಂಗ್ ಸಿಧು -Vishwanews24

ಜೋಳ, ರಾಗಿ, ತೊಗರಿ ನೀಡಬೇಕು ಎಂಬುದು ಪಡಿತರ ಚೀಟಿದಾರರ ಹಲವು ದಿನಗಳ ಬೇಡಿಕೆಯಾಗಿತ್ತು. ಇಂತಹ ಅವರ ಬೇಡಿಕೆಯನ್ನು ಹಲವು ದಿನಗಳ ಬಳಿಕ ಈಗ ಈಡೇರಿಸಲಾಗುತ್ತಿದೆ. ಆದ್ರೇ ಇದಕ್ಕಾಗಿ ಅಕ್ಕಿ ಪ್ರಮಾಣದಲ್ಲಿ ಕಡಿಮೆ ಮಾಡಿ, ಅದರ ಬದಲಾಗಿ ಜೋಳ, ರಾಗಿ, ತೊಗರಿ, ಕಡಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ.