ಇನ್ನುಂದೆ ಉಡುಪಿ ನಗರಸಭೆ ಬ್ರೋಕರ್ ಗಳಿಗೆ ನೋ ಎಂಟ್ರಿ: ರಘುಪತಿ ಖಡಕ್ ವಾರ್ನಿಂಗ್ – Vishwnaews24
ಇನ್ನುಂದೆ ಉಡುಪಿ ನಗರಸಭೆ ಬ್ರೋಕರ್ ಗಳಿಗೆ ನೋ ಎಂಟ್ರಿ: ರಘುಪತಿ ಖಡಕ್ ವಾರ್ನಿಂಗ್
ಉಡುಪಿ: ಉಡುಪಿ ನಗರಸಭೆಯಲ್ಲಿ ಬ್ರೋಕರ್ ಗಳ ಹಾವಳಿ ಜಾಸ್ತಿಯಾಗಿರುವ ಪರಿಣಾಮವಾಗಿ ಸಾರ್ವಜನಿಕ ಕೆಲಸಗಳು ಸರಗವಾಗಿ ನಡೆಯುತ್ತಿಲ್ಲ ಮತ್ತು ಅಧಿಕಾರಿ ವರ್ಗ ಕೇವಲ ಬ್ರೋಕರ್ ಮುಖಾಂತರ ಬರುವ ಕೆಲಸಗಳು ಮಾಡಿಕೊಡುತ್ತಾರೆ ಎಂದು ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ ಹಾಗೂ ವಿಪಕ್ಷ ಸದಸ್ಯ ರಮೇಶ್ ಕಾಂಚನ್ ಮಂಗಳವಾರದ ಸಾಮಾನ್ಯ ಸಭೆಯಲ್ಲಿ ಧ್ವನಿ ಎತ್ತಿದರು.

ಉಡುಪಿ ನಗರಸಭೆಯ ಅಧಿಕಾರಿಗಳು ಬ್ರೋಕರ್ ಗಳನ್ನು ಪ್ರೊತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಇದರಿಂದಾಗಿ ಜನಸಾಮಾನ್ಯರ ಕೆಲಸ ನಡೆಯುತ್ತಿಲ್ಲ ಮತ್ತು ಪಾರ್ಟಿಯ ಫೈಲ್ ಗಳಲ್ಲಿ ಬ್ರೋಕರ್ ಮೊಬೈಲ್ ಸಂಖ್ಯೆ ನಮೂದಿಸಿ ಇಡೀ ಫೈಲ್ ಬ್ರೋಕರ್ ಗಳ ಕಂಟ್ರೋಲ್ ನಲ್ಲಿ ಇರುತ್ತದೆಂದು ಆರೋಪಿಸಿದರು.
ಈ ಬಗ್ಗೆ ಶಾಸಕ ಸಭೆಯಲ್ಲಿ ಮಾತನಾಡಿ” ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಉಡುಪಿ ನಗರಸಭೆ ಎಂಟ್ರಿಗೆ ಅವಕಾಶವಿಲ್ಲ ಮತ್ತು ಇವರಿಗೆ ಬೆಂಬಲಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಖಡಕ್ ವಾರ್ನಿಂಗ್ ಮಾಡಿದರು.
ಭಟ್ಕಳ : ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಮುಳುಗಡೆ: ಓರ್ವ ನಾಪತ್ತೆ; ಇಬ್ಬರ ರಕ್ಷಣೆ – Vishwanews24
