ಮಂಗಳೂರಿಗೆ ಪ್ರಧಾನಿ ಆಗಮನ ಕಾರ್ಯಕ್ರಮ ಸಮಯ ಬದಲಾವಣೆ: ಮಧ್ಯಾಹ್ನ 1ಗಂಟೆಗೆ ಕರಾವಳಿಗೆ ಮೋದಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿಗೆ ಪ್ರಧಾನಿ ಆಗಮನ ಕಾರ್ಯಕ್ರಮ ಸಮಯ ಬದಲಾವಣೆ: ಮಧ್ಯಾಹ್ನ 1ಗಂಟೆಗೆ ಕರಾವಳಿಗೆ ಮೋದಿ

ಮಂಗಳೂರು: ‘ಸೆ.2ಕ್ಕೆ ದೇಶದ ಪ್ರಧಾನಿಗಳು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ವ್ಯತ್ಯಾಸದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಆಗಮಿಸಿ 1.15ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಸುಮಾರು 3ಗಂಟೆಯ ತನಕ ಕಾರ್ಯಕ್ರಮ ಇರಲಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ತಿಳಿಸಿದರು.

ಪ್ರಧಾನಿ ಕಾರ್ಯಕ್ರಮದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ‘ಇದು ಸರ್ಕಾರದ ಕಾರ್ಯಕ್ರಮ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮುಂದಾಳತ್ವದಲ್ಲಿ ಮತ್ತು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಮುತುವರ್ಜಿಯಿಂದ ಕೆಲಸ ಮಾಡಲಾಗುತ್ತಿದೆ.

ಸಾಕಷ್ಟು ಯೋಜನೆಗಳ ಶಿಲಾನ್ಯಾಸ, ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. 1,461 ಬಸ್‌ಗಳ ಬುಕ್ಕಿಂಗ್ ಆಗಿದೆ. 200ಕ್ಕೂ ಮಿಕ್ಕಿದ ಟೆಂಪೋ ಟ್ರಾವೆಲರ್‌ಗಳ ಬುಕ್ಕಿಂಗ್ ಆಗಿದೆ. ಇನ್ನುಂದೆ ಉಡುಪಿ ನಗರಸಭೆ ಬ್ರೋಕರ್ ಗಳಿಗೆ ನೋ ಎಂಟ್ರಿ: ರಘುಪತಿ ಖಡಕ್ ವಾರ್ನಿಂಗ್ – Vishwnaews24 

ಲಭ್ಯವಿರುವ ಮಾಹಿತಿಯ ಪ್ರಕಾರ ಸುಮಾರು 1ಲಕ್ಷಕ್ಕಿಂತಲೂ ಅಧಿಕ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಜ್ಜಾಗಿದ್ದಾರೆ.

ಭದ್ರತೆಯ ದೃಷ್ಠಿಯಿಂದ ಕಾರ್ಯಕ್ರಮ ಮುಂಚಿತವಾಗಿ ಪ್ರಾರಂಭವಾಗಲಿದೆ. ಕಾರ್ಯಕರ್ತರು 12.30 ರ ಸುಮಾರಿಗೆ ಕಾರ್ಯಕ್ರಮದ ವೆರಾಂಡವನ್ನು ತಲುಪಬೇಕು ಎಂದು ಮನವಿ ಮಾಡುತ್ತೇನೆ.

ಬಂದವರಿಗೆ ಉಪಾಹಾರದ ವ್ಯವಸ್ಥೆ ಇದೆ. ಕಾರ್ಯಕ್ರಮ ಮುಗಿದ ಬಳಿಕ ಪಾರ್ಟಿಯ ವತಿಯಿಂದ ಉಪಾಹಾರವನ್ನು ಪೊಟ್ಟಣದ ಮೂಲಕ ನಾವು ಬಸ್ಸಿಗೆ ಕೊಡಲು ನಿಶ್ಚಯಿಸಿದ್ದೇವೆ’ ಎಂದು ಹೇಳಿದರು. ಭಟ್ಕಳ : ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಮುಳುಗಡೆ: ಓರ್ವ ನಾಪತ್ತೆ; ಇಬ್ಬರ ರಕ್ಷಣೆ – Vishwanews24

Leave a Reply