ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ನಿಧನ – vishwanews24
ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ನಿಧನ
ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ (75) ಅವರು ಕೋಟೇಶ್ವರದ ಡಾಕ್ಟರ್ ಎನ್ ಆರ್ ಆಚಾರ್ಯ ಸ್ಮಾರಕ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.
ಪಯಣ, ಪಲಾಯನ, ಪರಿಭ್ರಮಣ, ಪದರಗಳು, ಕಾದಂಬರಿಗಳು. ಸಾತತ್ತೆಗೊಂದು ಸನ್ಮಾನ,ಸೆಕ್ರೆಟರ ಸಾಹೇಬರ ಹೆಂಡತಿ ಮತ್ತು ಇತರ ಕಥೆಗಳು ಹಾಗೂ ಅಸ್ತಮಾ ಕೊಂಕಣಿ ಕಾದಂಬರಿ ಸೇರಿದಂತೆ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಕೃತಿ ಬರೆದಿದ್ದಾರೆ. ಅತ್ಯುತ್ತಮ ಸಂಘಟಕರು, ಅಂಕಣ ಬರೆಹಗಾರರಾಗಿದ್ದರು. ಹತ್ತು ವರ್ಷಗಳ ಕಾಲ ಚಡಗ ಕಾದಂಬರಿ ಪ್ರಶಸ್ತಿ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.
ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸ್ಕೂಟರ್ ಸಹಿತ ನೀರಿಗೆ ಬಿದ್ದ ವ್ಯಕ್ತಿ ನಾಪತ್ತೆ – vishwanews24
ಸಾಹಿತ್ಯ , ಸಂಘಟನೆ, ಪತ್ರಿಕೋದ್ಯಮ ಈ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯವಾದುದು. ಇವರ ನಿಧನ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ವೆಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಹಾಗೂ ಡಾ.ಎನ್. ಭಾಸ್ಕರಾಚಾರ್ಯರು, ಲೇಖಕ ಪ್ರಕಾಶಕರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ. ಶಾರದಾ ಭಟ್ ಅವರ ಇಚ್ಛೆಯಂತೆ ಅವರ ದೇಹವನ್ನು ಸಂಶೋಧನೆಗಾಗಿ ಮಣಿಪಾಲ ಆಸ್ಪತ್ರೆಗೆ ನೀಡಲಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮನ ವಿಗ್ರಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ – vishwanews24
