ಎಣ್ಣೆ ದರ ಭಾರಿ ಹೆಚ್ಚಳ : ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ – vishwanews24

Featured, ರಾಜ್ಯ ನ್ಯೂಸ್

ಎಣ್ಣೆ’ ದರ ಭಾರಿ ಹೆಚ್ಚಳ : ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್

ಬೆಂಗಳೂರು : ಹೊಸ ವರ್ಷಕ್ಕೆ ರಾಜ್ಯಾದ್ಯಂತ ಮದ್ಯ ದರ ಹೆಚ್ಚಳವಾದ್ದು,ಅಬಕಾರಿ ಇಲಾಖೆ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಮದ್ಯದ ಮೂರು ಬ್ರಾಂಡ್ ಗಳ ಬೆಲೆ ಹೆಚ್ಚಳವಾಗಿದ್ದು, ಮದ್ಯದ ಕಂಪನಿಗಳು ಕ್ವಾಟರ್ ಗೆ 20-30 ರೂ ಏರಿಕೆ ಮಾಡಿದೆ .

ಓಟಿ 180 ಎಂಎಲ್ ನ ಈ ಹಿಂದಿನ ದರ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ ಆಗಿದೆ. ಬಿಪಿ180 ಎಂಎಲ್ ಮೊದಲು 110 ರೂಪಾಯಿ, ಇಂದಿನಿಂದ- 145 ರೂಪಾಯಿ, 8PM 180 ಎಂಎಲ್ ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ ಎಂದು ತಿಳಿದು ಬಂದಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ಮದ್ಯದ ಕಂಪನಿಗಳು ಬೆಲೆ ಏರಿಕೆ ಮಾಡಿದೆ.

ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ನಿಧನ – vishwanews24

Leave a Reply