ಉಡುಪಿ :ಕರಾವಳಿಯಲ್ಲಿ ಹಿಂದೂ ದೇವರ ಅಪಹಾಸ್ಯ ಖಂಡಿಸಿ ನಾಳೆ( ಜ.11) ಜಿಲ್ಲೆಯಾದ್ಯಂತ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಸಾಮೂಹಿಕ ಪ್ರಾರ್ಥನೆ – Vishwanews24

Featured, ಉಡುಪಿ

ಉಡುಪಿ :ಕರಾವಳಿಯಲ್ಲಿ ಹಿಂದೂ ದೇವರ ಅಪಹಾಸ್ಯ ಖಂಡಿಸಿ ಜ.11 ರಂದು ಜಿಲ್ಲೆಯಾದ್ಯಂತ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಸಾಮೂಹಿಕ ಪ್ರಾರ್ಥನೆ – Vishwanews24

ಉಡುಪಿ : ಕರಾವಳಿಯಲ್ಲಿ ಹಲವು ಸಮಯಗಳಿಂದ ನಡೆಯುತ್ತಿರುವ ಹಿಂದೂ ದೇವರ ಅವಹೇಳನ, ಅಪಹಾಸ್ಯ ಮಾಡುವುದು ಹಾಗೂ ದೇವಸ್ಥಾನಗಳನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದಿರುವಂತಹ ಕೃತ್ಯಗಳನ್ನು ಖಂಡಿಸಿ ನಾಳೆ( ಜ.11) ಜಿಲ್ಲೆಯಾದ್ಯಂತ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷದ್ ಭಜರಂಗದಳದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕರಾವಳಿ ಭಾಗದಲ್ಲಿ, ಹಲವಾರು ಸಮಯಗಳಿಂದ ಹಿಂದೂಗಳ ಆರಾಧ್ಯ ದೈವ ದೇವರನ್ನು ಅಪಹಾಸ್ಯ ಮಾಡುವುದು, ನಿಂದನೆ ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಬಿಡಿಸಿ ಹಂಚುವುದು, ಪವಿತ್ರ ನಾಗನ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದು, ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳ ಕಾಣಿಕೆ ಡಬ್ಬಿಗಳಿಗೆ ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವಂತಹ ಕೃತ್ಯಗಳು ನಿರಂತರವಾಗಿ ಜಿಹಾದಿ ಮಾನಸಿಕತೆಯ ವ್ಯಕ್ತಿಗಳಿಂದ ನಡೀತಾ ಇದೆ.

ಉಡುಪಿ: ಪರ್ಯಾಯ ಮೆರವಣಿಗೆಗೆ ಮುಖ್ಯಮಂತ್ರಿಗಳು ಅನುಮತಿ ನೀಡಬೇಕು: ಶಾಸಕ ರಘುಪತಿ ಭಟ್ ಮನವಿ – Vishwanews24

ಈದೀಗ ಮತ್ತೆ ವಿಟ್ಲ ಸಾಲೆತ್ತೂರಿನಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ವೇಷ ಹಾಕಿ ವಿಚಿತ್ರವಾಗಿ ಕುಣಿದು ವಿಕೃತ ಸಂತೋಷ ಪಡುವ ಘಟನೆ ಅತ್ಯಂತ ಖಂಡನೀಯವಾಗಿದೆ. ಇದು ಸಮಸ್ತ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಯಾಗಿದೆ. ಈ ಎಲ್ಲಾ ಕೃತ್ಯಗಳನ್ನು ಖಂಡಿಸಿ, ದೈವ ದೇವರುಗಳ ಮೊರೆ ಹೋಗಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಮತ್ತು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ಉಡುಪಿ ಜಿಲ್ಲೆಯಾದ್ಯಂತ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಜ.11 ಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

ಈ ಸಾಮೂಹಿಕ ಪ್ರಾರ್ಥನೆಯು ಉಡುಪಿಯ ಕೃಷ್ಣ ಮಂದಿರ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಆನೆಗುಡ್ಡೆ , ಪೆರ್ಡೂರು ಅನಂತಪದ್ಮನಾಭ, ಕಾರ್ಕಳ ವೆಂಕಟರಮಣ ದೇವಸ್ಥಾನ ಮೊದಲಾದ ಪ್ರಮುಖ ದೇವಸ್ಥಾನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಭಜರಂಗದಳ ಕರ್ನಾಟಕದ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, ಭಜರಂಗದಳ ಉಡುಪಿ ಇದರ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.

ಬೆಂಗಳೂರು : ಬೂಸ್ಟರ್ ಡೋಸ್ ಗೆ ಚಾಲನೆ ನೀಡಿದ ಸಿಎಂ – Vishwanews24

Leave a Reply