ಉಡುಪಿ: ಕಾಂಗ್ರೆಸನ್ನು ಸೋಲಿಸಲು ಸಾಧ್ಯವಿಲ್ಲ  : ಪ್ರಸಾದ್ ರಾಜ್ ಕಾಂಚನ್ – Vishwanews24

Featured, ಉಡುಪಿ

ಉಡುಪಿ: ಕಾಂಗ್ರೆಸನ್ನು ಸೋಲಿಸಲು ಸಾಧ್ಯವಿಲ್ಲ  : ಪ್ರಸಾದ್ ರಾಜ್ ಕಾಂಚನ್

ಉಡುಪಿ: ಚುನಾವಣೆ ಪ್ರಚಾರ ಕಾರ್ಯ ಬಿರುಸುಗೊಳ್ಳುತ್ತಿದ್ದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮನೆ ಮನೆ ಪ್ರಚಾರ ಮತ್ತು ಕಾರ್ಯಕರ್ತರ ಸಭೆಗಳ ಮೂಲಕ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಕಡೆಕಾರಿನ ವಾರ್ಡ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಸಾದ್ ರಾಜ್ ಕಾಂಚನ್ ಅವರು “ ಕಾಂಗ್ರೆಸ್ ಕಾರ್ಯಕರ್ತರು ಇನ್ನಷ್ಟು ಚಟುವಟಿಕೆಯಿಂದ ಕೆಲಸ ಮಾಡಿದ್ದಲ್ಲಿ ದೇಶದಲ್ಲಿ ಕಾಂಗ್ರೆಸನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಉಡುಪಿ ನಗರದ ಒಳಕಾಡು ವಾರ್ಡ್, ತೆಂಕನಿಡಿಯೂರು ವಾರ್ಡ್, ಅಜ್ಜರಕಾಡು ವಾರ್ಡ್ ಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಿ ಪ್ರಚಾರ ಕಾರ್ಯ ನಡೆಸಿದರು.

ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಮಾಜಿ ಶಾಸಕರಾದ ಬಸವರಾಜ್ ಮತ್ತು ಎಚ್.ಇಬ್ರಾಹಿಂ ಸಾಹೇಬ್ ಅವರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಬೇಟಿಯಾಗಿ ಹಿರಿಯ ನಾಯಕರಿಂದ ಆರ್ಶೀವಾದ ಪಡೆದು, ಮಾಹಿತಿ ಮತ್ತು ಸಲಹೆ ಗಳನ್ನು ಕೂಡಾ ಪಡೆದರು.

ಉಡುಪಿ: ಜಿ ಶಂಕರ್ ಮನೆ ಮೇಲೆ ಐಟಿ ರೈಡ್ – ಮೊಗವೀರ ಸಮುದಾಯಕ್ಕೆ ಬಿಜೆಪಿ ಸರಕಾರ ಮಾಡಿದ ಬಹುದೊಡ್ಡ ಅವಮಾನ :ರಮೇಶ್ ಕಾಂಚನ್  – Vishwanews24

ಮಾತ್ರವಲ್ಲದೇ ಇವೆಲ್ಲದರ ನಡುವೆ ಕೆಮ್ಮಣ್ಣು ಗುಳಿಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಹರಕೆ ಸೇವೆಯಲ್ಲಿ ಮತ್ತು ಆರೂರು ಮಹತೋಭಾರ ವಿಷ್ಣುಮೂರ್ತಿ ದೇವಸ್ಥಾನದ ರಥೋತ್ಸವದಲ್ಲಿ ಭಾಗವಹಿಸಿ ರಥ ಎಳೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕರಾದ ರವಿರಾಜ್, ಮಮತಾ ಶೆಟ್ಟಿ, ಧನಂಜಯ್ ಕುಂದರ್, ಕೀರ್ತಿ ಶೆಟ್ಟಿ , ಗೋಪಾಲಕೃಷ್ಣ ಶೆಟ್ಟಿ, ನಾಗೇಶ್ ಉದ್ಯಾವರ, ಮೀನಾ ಪಿಂಟೊ, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಪ್ರಖ್ಯಾತ್ ಶೆಟ್ಟಿ, ಕಡೆಕಾರ್ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಜತಿನ್ ಕಡೆಕಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರವಿರಾಜ್, ವನಜಾ ಜಯಕರ, ಕೇಶವ ಕೋಟ್ಯಾನ್, ವಾಮನ ಬಂಗೇರ, ನವೀನ ಶೆಟ್ಟಿ, ಸುಕೇಶ್ ಶೆಟ್ಟಿ, ಮಹಾಬಲ ಕುಂದರ್,ಸುರೇಶ್ ಬನ್ನಂಜೆ, ಸವಿತಾ ಶೆಣೈ, ಜ್ಯೋತಿ ಹೆಬ್ಬಾರ್, ಜಯನಂದ ನಾಯ್ಕ್, ಐರಿನ್ ಡಿ’ಸೋಜಾ,ತುಳಿಸಿದಾಸ್ ಪುರಂದರ, ವಿಲಿಯಂ ಪೇರ್ನಾಂಡಿಸ್, ಪ್ರಶಾಂತ ಉಪಸ್ಥಿತರಿದ್ದರು.

ಆಪರೇಷನ್ ಕಾವೇರಿ: ಸುಡಾನ್ ನಿಂದ 260 ಭಾರತೀಯರ ಸ್ಥಳಾಂತರ, ಭಾರತ್ ಮಾತಾ ಕಿ ಜೈ, ಮೋದಿ ಜಿಂದಾಬಾದ್ ಘೋಷಣೆ – Vishwanews24

Leave a Reply