ಕಾಪು : ಕಾರ್ಯಕರ್ತರ ಪರಿಶ್ರಮದಿಂದಾಗಿ ಈ ಬಾರಿಯೂ ಕಾಪು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ವಿಜಯ ಮಾಲೆ : ಗುರ್ಮೆ – Vishwanews24
ಕಾಪು : ಕಾರ್ಯಕರ್ತರ ಪರಿಶ್ರಮದಿಂದಾಗಿ ಈ ಬಾರಿಯೂ ಕಾಪು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ವಿಜಯ ಮಾಲೆ : ಗುರ್ಮೆ
ರಾಜ್ಯ ಸರಕಾರ ಮಾಡಿದ ಸಾಧನೆಗಳೇ ನಮಗೆ ಶ್ರೀರಕ್ಷೆ..
ಮನೆ ಮನೆ ಭೇಟಿ ನೀಡಿ ವಿವಿಧೆಡೆ ಮತ ಯಾಚನೆ ..
ನಡಿಯಾಲು ಧೂಮಾವತಿ ದೈವಸ್ಥಾನ ಸೇರಿದಂತೆ ವಿವಿದೆಡೆ ತೆರಳಿ ದೈವ – ದೇವರ ಆಶೀರ್ವಾದ ಪಡೆದ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ..
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಬುಧವಾರ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಜತೆಗೂಡಿ ತೆಂಕ ಗ್ರಾಮ ಪಂಚಾಯತ್, ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ ವಿವಿಧೆಡೆ ಮತ ಯಾಚಿಸಿದರು.
ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಮಾಡಿದ ಸಾಧನೆಗಳೇ ನಮಗೆ ಶ್ರೀರಕ್ಷೆಯಾಗಿದೆ. ಸರಕಾರ ಒದಗಿಸುತ್ತಿರುವ ಸವಲತ್ತುಗಳು ಅರ್ಹರನ್ನು ತಲುಪುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರ ಶ್ರಮವೇ ಮುಖ್ಯ ಕಾರಣವಾಗಿದ್ದು ಈ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಗಳಿಸುವಂತಾಗಲು ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಎರ್ಮಾಳು ಜನಾರ್ದನ ದೇವಸ್ಥಾನ, ವೀರಭದ್ರ ದೇವಸ್ಥಾನ, ನಡಿಯಾಲು ಧೂಮಾವತಿ ದೈವಸ್ಥಾನವೂ ಸೇರಿದಂತೆ ವಿವಿದೆಡೆ ತೆರಳಿ ದೈವ – ದೇವರ ಆಶೀರ್ವಾದ ಪಡೆದರು.
ತೆಂಕ ಗ್ರಾ. ಪಂ. ಉಪಾಧ್ಯಕ್ಷೆ ಜಯಶ್ರೀ ಹರೀಶ್, ಪಡುಬಿದ್ರಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗಿತಾಂಜಲಿ ಎಂ. ಸುವರ್ಣ, ಚುನಾವಣಾ ಅಭ್ಯರ್ಥಿ ಪ್ರಮುಖ್ ಗಂಗಾಧರ್ ಸುವರ್ಣ, ಅನಿಲ್ ಕುಮಾರ್, ಮಾಜಿ ತಾ.ಪಂ. ಸದಸ್ಯ ಕೇಶವ ಮೊಯ್ಲಿ, ಪಕ್ಷದ ಪ್ರಮುಖರಾದ ಸತೀಶ್ ಸಾಲ್ಯಾನ್, ವಿನಯ ಶೆಟ್ಟಿ, ಧರ್ಮರಾಜ್, ಸಂತೋಷ್, ಅಮಣಿ, ಮನೋಜ್, ಧೀರಜ್, ಮೋಹನ್ ಸುವರ್ಣ, ವಿನೀತ್, ನಿತೇಶ್ ಕುಮಾರ್, ಪವನ್ ಎರ್ಮಾಳು, ಜಯೇಂದ್ರ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ಕಾಂಗ್ರೆಸನ್ನು ಸೋಲಿಸಲು ಸಾಧ್ಯವಿಲ್ಲ : ಪ್ರಸಾದ್ ರಾಜ್ ಕಾಂಚನ್ – Vishwanews24
