ಉಡುಪಿ ಜಿಲ್ಲೆಯ ಖ್ಯಾತ ವಕೀಲ ಸಂಕಪ್ಪ ಅಮೀನ್ ಕಾಂಗ್ರೇಸ್ ತ್ಯಜಿಸಿ – ಜೆಡಿಎಸ್ ಸೇರ್ಪಡೆ :vishwanews24

Featured, ಉಡುಪಿ

ಉಡುಪಿ ಜಿಲ್ಲೆಯ ಖ್ಯಾತ ವಕೀಲ ಸಂಕಪ್ಪ ಅಮೀನ್ ಕಾಂಗ್ರೇಸ್ ತ್ಯಜಿಸಿ – ಜೆಡಿಎಸ್ ಸೇರ್ಪಡೆ :vishwanews24

ಉಡುಪಿಯ ಪ್ರಖ್ಯಾತ ವಕೀಲರು, ಬಿಲ್ಲವ ಮುಖಂಡರು, ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷರು ಅದ ಶ್ರೀ ಸಂಕಪ್ಪ.ಎ ಅವರಿಗೆ ಆಗಸ್ಟ್ 1 ರಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಜಾತ್ಯತೀತ ಜನತಾದಳ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀ ಎಸ್. ಎಲ್. ಭೋಜೆ ಗೌಡ, ಉಡುಪಿ ಜಿಲ್ಲಾಧ್ಯಕ್ಷ ಶ್ರೀ ಯೋಗೀಶ್ ವಿ ಶೆಟ್ಟಿ, ನಾಯಕರಾದ ಶ್ರೀ ವಸಂತ ಪೂಜಾರಿ ಮಂಗಳೂರು, ಶ್ರೀ ಇಕ್ಬಾಲ್ ಮಂಗಳೂರು,ಶ್ರೀ ಇಕ್ಬಾಲ್ ಅತ್ರಾಡಿ, ಶ್ರೀ ಭರತ್ ಕುಮಾರ್ ಶೆಟ್ಟಿ, ಶ್ರೀ ಸಂಜಯ ಕುಮಾರ್, ಶ್ರೀ ಚಂದ್ರಹಾಸ್,ಮತ್ತುಶ್ರೀ ರಜಾಕ್ ಉಚ್ಚಿಲ ಉಪಸ್ಥಿತರಿದ್ದರು.

Leave a Reply