ಉಡುಪಿ : ತುಳು ಭಾಷೆಗೆ ನಮ್ಮ ರಾಜ್ಯದಲ್ಲಿ ಇನ್ನಾದರೂ ಮಾನ್ಯತೆ ಸಿಗಬಹುದು : ಪ್ರಮೋದ್ ಮಧ್ವರಾಜ್ ವಿಶ್ವಾಸ – Vishwanews24

Featured, ಉಡುಪಿ

ಉಡುಪಿ : ತುಳು ಭಾಷೆಗೆ ನಮ್ಮ ರಾಜ್ಯದಲ್ಲಿ ಇನ್ನಾದರೂ ಮಾನ್ಯತೆ ಸಿಗಬಹುದು : ಪ್ರಮೋದ್ ಮಧ್ವರಾಜ್ ವಿಶ್ವಾಸ

ಉಡುಪಿ : ಇನ್ನಾದರೂ ರಾಜ್ಯದಲ್ಲಿ ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಮಾನ್ಯತೆ ಸಿಗಬಹುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನ ಮದ್ದಣ ಮಂಟಪದಲ್ಲಿ ನಡೆದ ತುಳುಕೂಟ ಉಡುಪಿ ಇದರ 21ನೇ ವರ್ಷದ ಕೆಮ್ತೂರು ದೊಡ್ಡಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಳು ಭಾಷೆಗೆ ಇತರ ನಾಲ್ಕು ಭಾಷೆಗಳಿಗೆ ಸಿಕ್ಕಿರುವ ಮಾನ್ಯತೆ ಸಿಕ್ಕಿಲ್ಲ, ಪ್ರಸ್ತುತ ರಾಜ್ಯದ ಸಂಸ್ಕೃತಿ ಸಚಿವರು ತುಳುವರಾದ್ದರಿಂದ ಭಾಷೆಗೆ ನಮ್ಮ ರಾಜ್ಯದಲ್ಲಿಯಾದರೂ ಮಾನ್ಯತೆ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಗ್‌ಬಾಸ್‌ ಸೀಸನ್‌ ಗೆಲ್ಲಲು ಕೊರಗಜ್ಜನ ಆಶೀರ್ವಾದವೇ ಕಾರಣ : ಮಂಗಳೂರಿನಲ್ಲಿ ರೂಪೇಶ್ ಶೆಟ್ಟಿ – Vishwanews24

ಹಾಗೂ ಜನರನ್ನು ಸೇರಿಸುವುದಕ್ಕೆ ನಾಟಕಗಳಲ್ಲಿ ಹಾಸ್ಯ ಬೇಕಾಗಬಹುದು, ಆದರೇ ಗುಣಾತ್ಮಕ ನಾಟಕಗಳಿಂದಷ್ಟೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ತುಳುಕೂಟ ಈ ನಿಟ್ಟಿನಲ್ಲಿ ಶ್ಲಾಘನೀಯ ಸಾಧನೆ ಮಾಡುತ್ತಿದೆ ಎಂದವರು ತುಳುಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‍ನ ಅಧ್ಯಕ್ಷ ಯಶಪಾಲ್ ಸುವರ್ಣ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕೆಮ್ತೂರು ಕುಟುಂಬದ ವಿಜಯ ಕುಮಾರ್ ಶೆಟ್ಟಿ, ತುಳು ಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಉಪಾಧ್ಯಕ್ಷ ಸದಾಶಿವ ಭಟ್, ಕೋಶಾಧಿಕಾರಿ ಚೈತನ್ಯ ಎಂ.ಜಿ.,ಸಮಾಜಸೇವಕ ವಿಶ್ವನಾಥ ಶೆಣೈ, ಕೂಟದ ಉಪಾಧ್ಯಕ್ಷ ದಿವಾಕರ ಸನಿಲ್, ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ಪ್ರಕಾಶ್ ಸುವರ್ಣ ಕಟಪಾಡಿ ಅವರು ಉಪಸ್ಥಿತರಿದ್ದರು.

ಕುಂದಾಪುರ : ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ – Vishwanews24

Leave a Reply