ಉಡುಪಿ: ಶಿರ್ವ ಫಾ. ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣ : ಓರ್ವನ ಬಂಧನ -Vishwanews24

Featured, ಉಡುಪಿ

ಉಡುಪಿ: ಶಿರ್ವ ಫಾ. ಮಹೇಶ್ ಡಿಸೋಜ ಆತ್ಮಹತ್ಯೆ ಪ್ರಕರಣ : ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ  ಡೇವಿಡ್ ಡಿಸೋಜಾ ಬಂಧನ

ಉಡುಪಿ; ಶಿರ್ವ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಹಾಯಕ ಧರ್ಮ ಗುರು ಫಾ.ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಡೇವಿಡ್ ಡಿಸೋಜಾನ ಪತ್ನಿ ಜೊತೆ ಫಾ.ಮಹೇಶ್ ಡಿಸೋಜಾ ನಿರಂತರ ಫೋನ್ ಸಂಭಾಷಣೆ, ಮೊಬೈಲ್ ಚಾಟಿಂಗ್ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪತ್ನಿಯ ಮೊಬೈಲ್ ನೋಡಿದ ಡೇವಿಡ್ ನೇರವಾಗಿ ಶಿರ್ವ ಚರ್ಚ್‌ಗೆ ಹೋಗಿ ಧರ್ಮಗುರುಗಳಿಗೆ ಬೆದರಿಸಿದ್ದನು ಎನ್ನಲಾಗಿದೆ.

ಇದೀಗ ಆತ್ಮಹತ್ಯೆಗೆ ಪ್ರೇರಣೆ ಆರೋಪದಡಿ ತನಿಖಾಧಿಕಾರಿ ಕಾಪು ವೃತ್ತ ನೀರಿಕ್ಷಕ ಮಹೇಶ ಪ್ರಸಾದ್ ಆರೋಪಿ ಡೇವಿಡ್ ಡಿಸೋಜಾನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿ ಡೇವಿಡ್’ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.