ನಾನು ಹಿಂದಿನ ಜನ್ಮದಲ್ಲಿ ಇಲ್ಲಿಯೇ ಹುಟ್ಟಿದ್ದೆ, ಕನ್ನಡಿಗನೇ ಆಗಿದ್ದೆ ಎಂದು ಬಲವಾಗಿ ನಂಬಿದ್ದೇನೆ : ಸೋನು ನಿಗಮ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಕನ್ನಡದ ಬಗ್ಗೆ ಮಾತನಾಡಿದ್ದಾರೆ. 

“ನಾನು ಹಿಂದಿನ ಜನ್ಮದಲ್ಲಿ ಇಲ್ಲಿಯೇ ಹುಟ್ಟಿದ್ದೆ, ಕನ್ನಡಿಗನೇ ಆಗಿದ್ದೆ ಎಂದು ಬಲವಾಗಿ ನಂಬಿದ್ದೆ” ಇದು ಖ್ಯಾತ ಗಾಯಕ ಸೋನು ನಿಗಮ್ ಹೇಳಿದ ಮಾತುಗಳು.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಸೋನು ನಿಗಮ್ ಈ ಅಭಿಮಾನದ ಮಾತುಗಳನ್ನಾಡಿದರು. ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನೇ ಆಗಿದ್ದೆ ಎಂದು ನಾನು ಬಲವಾಗಿ ನಂಬಿದ್ದೆ. ಯಾಕೆಂದರೆ ನಾನು ಹಿಂದಿ ಹಾಡು ಹಾಡಲು ಬಂದಿದ್ದೆ. ಆದರೆ ಹಿಂದಿಗಿಂತ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕನ್ನಡದ ಜನರ ಬಗ್ಗೆ ತುಂಬ ಗೌರವವಿದೆ. ನಿಮ್ಮ ಪ್ರೀತಿ ಪಡೆಯಲು ಹೆಮ್ಮೆ ಆಗುತ್ತಿದೆ ಎಂದು ಸೋನು ನಿಗಮ್ ಹೇಳಿದರು.

ನಾನು ದುಬೈ, ಆಸ್ಪ್ರೇಲಿಯಾ, ಅಮೇರಿಕಾ ಹೀಗೆ ಹಲವು ದೇಶಗಳಲ್ಲಿ ಕಾರ್ಯಕ್ರಮ ಕೊಡುತ್ತೇನೆ. ಯಾವ ದೇಶದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರೂ ಅಲ್ಲಿ ಒಂದು ‘ಕನ್ನಡ’ ಎಂದು ಧ್ವನಿ ಕೇಳುತ್ತದೆ. ಆಗ ನಾನು ‘ಅನುಸುತ್ತಿದೆ ಯಾಕೋ ಇಂದು’ ಎಂದು ಹಾಡುತ್ತೇನೆ ಎಂದರು.