ಉಡುಪಿ: ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ-ಸಮಾವೇಶಕ್ಕೆಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳು ಮತ್ತು ಅಂಬೇಡ್ಕರ್ ಯುವ ಸೇನೆಯ ಬೆಂಬಲವಿಲ್ಲ – Vishwanews24
ಉಡುಪಿ: ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ-ಸಮಾವೇಶಕ್ಕೆಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳು ಮತ್ತು ಅಂಬೇಡ್ಕರ್ ಯುವ ಸೇನೆಯ ಬೆಂಬಲವಿಲ್ಲ
ಉಡುಪಿ: ಮೇ 14ರಂದು ಉಡುಪಿಯಲ್ಲಿ ನಡೆಯುವ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳು ಮತ್ತು ಅಂಬೇಡ್ಕರ್ ಯುವ ಸೇನೆಯ ಬೆಂಬಲ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ಕರಾವಳಿಯು ಪಾರಂಪರಿಕವಾಗಿ ಸೌಹಾರ್ದತೆಯ ನೆಲೆವೀಡು ಇಲ್ಲಿದೆ ಜನರು ಕಷ್ಟಜೀವಿಗಳು, ವಿದ್ಯಾವಂತರು, ಪ್ರವಾಸೋದ್ಯಮ, ಮೀನುಗಾರಿಕೆ, ಹೈನುಗಾರಿಕೆ, ಸಹಕಾರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡಿರುವ ಇಲ್ಲಿಯ ಜನರು ದೇಶದ ಅಭಿವೃದ್ಧಿ ಮತ್ತು ಆಂತರಿಕ ಭದ್ರತೆಗೆ ಸೌಹಾರ್ದತೆಯ ಪ್ರಾಮುಖ್ಯತೆಯನ್ನು ಅರಿತವರಾಗಿರುತ್ತಾರೆ. ಇಂತಹ ಜನರ ನಡುವೆ ಸೌಹಾರ್ದತೆಯ ಪಾಠ ಮಾಡುವುದು ಹಾಸ್ಯಾಸ್ಪದ ಸಂಗತಿಯಾಗಿದೆ.

ಕಾರ್ಯಕ್ರಮದ ಸಂಘಟಕರು ಕಾರ್ಯಕ್ರಮದ ನೈಜ ಉದ್ದೇಶ ಮತ್ತು ಗುರಿಯನ್ನು ಸಾರ್ವಜನಿಕರಿಗೆ ಮನದಟ್ಟು ಮಾಡುವಲ್ಲಿ ವಿಫಲರಾಗಿದ್ದಾರೆ. ಸಮುದಾಯಗಳನ್ನು ಒಳಗೊಳ್ಳುವಿಕೆಯ ಪ್ರಾಮಾಣಿಕ ಪ್ರಯತ್ನಗಳನ್ನು ಕೂಡ ಸಂಘಟಕರು ಮಾಡಿರುವುದಿಲ್ಲ. ದಲಿತ ಸಮಾಜವು ಈ ಸಮಾವೇಶದಲ್ಲಿ ಭಾಗವಹಿಸಿ, ಸಾಧಿಸಬೇಕಾದ್ದಾದರು ಏನು? ದಲಿತರ ಅಭಿವೃದ್ಧಿ ಮತ್ತು ವಿಮೋಚನೆಗೆ ಇಂತಹ ಕಾರ್ಯಕ್ರಮಗಳಿಂದ ಆಗುವ ಪ್ರಯೋಜನವಾದರೂ ಏನು? ಇಂತಹ ಕಾರ್ಯಕ್ರಮಗಳು ಸಮಾಜದ ಸಹಜ ಸೌಹಾರ್ದತೆಗೆ ಭಂಗ ತರಲಾರದೆ? ಎಂದು ಪ್ರಶ್ನಿಸಿರುವ ದಲಿತ ನಾಯಕರುಗಳು ಸಮಾಜದ ಏಕತೆ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಈ ಕಾರ್ಯಕ್ರಮದಲ್ಲಿ ನಮ್ಮ ಸಂಘಟನೆಯು ಭಾಗವಹಿಸುವುದಿಲ್ಲ.
ಈ ಕಾರ್ಯಕ್ರಮಕ್ಕೆ ಬೆಂಬಲವನ್ನು ನೀಡುವುದಿಲ್ಲವೆಂದು ದ.ಸಂ.ಸ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ದ.ಸಂ.ಸ ರಾಜ್ಯ ಸಮಿತಿ ಸದಸ್ಯ (ಪ್ರೋ ಕೃಷ್ಣಪ್ಪ ಸ್ಥಾಪಿತ) ಶೇಖರ ಹೆಜಮಾಡಿ, ಜಿಲ್ಲಾ ಸಂಚಾಲಕ (ಭೀಮಾ ವಾದ) ವಿಶ್ವನಾಥ ಬೆಳ್ಳಂಪಳ್ಳಿ, ಜಿಲ್ಲಾ ಸಂಚಾಲಕ (ಪ್ರೋ ಕೃಷ್ಣಪ್ಪ ಸ್ಥಾಪಿತ) ಆನಂದ ಬ್ರಹ್ಮಾವರ, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ನೆರ್ಗಿ, ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಜಿಲ್ಲಾ ಸಂಘಟನಾ ಸಂಚಾಲಕ ಸುಧಾಕರ ಸೂರ್ಗೋಳಿ, ಅಂಬೇಡ್ಕರ್ ಯುವ ಸೇನೆಯ ಲೋಕೇಶ್ ಪಡುಬಿದ್ರಿ, ದಯಾನಂದ ಕಪ್ಪಟ್ಟು, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕ ಶ್ರೀಮತಿ ಗೀತಾ ಸುರೇಶ್ ಕುಮಾರ್, ಬೈಂದೂರು ತಾಲೂಕು ಸಂಚಾಲಕ ನಾಗರಾಜ ಉಪ್ಪುಂದ, ಬ್ರಹ್ಮಾವರ ತಾಲೂಕು ಸಂಚಾಲಕರ ನಾರಾಯಣ ಗುಂಡಿ ಮತ್ತು ಕಾರ್ಕಳ ತಾಲೂಕು ಸಂಚಾಲಕ ಶಂಕರ ಅಜೆಕಾರು ಜಂಟಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಕಾಪು : ಭೂತಾಯಿ ಮೀನಿನ ಸುಗ್ಗಿ ಹಬ್ಬ: ಕೈಪುಂಜಾಲು ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಅಧಿಕ ಮೀನು ಬಲೆಗೆ – Vishwanews24
