ಕಾಪು : ಭೂತಾಯಿ ಮೀನಿನ ಸುಗ್ಗಿ ಹಬ್ಬ: ಕೈಪುಂಜಾಲು ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಅಧಿಕ ಮೀನು ಬಲೆಗೆ – Vishwanews24
ಕಾಪು : ಭೂತಾಯಿ ಮೀನಿನ ಸುಗ್ಗಿ ಹಬ್ಬ: ಕೈಪುಂಜಾಲು ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಅಧಿಕ ಮೀನು ಬಲೆಗೆ
ಕಾಪು: ಇಲ್ಲಿನ ಕೈಪುಂಜಾಲು ಓಂ ಸಾಗರ್ ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಭೂತಾಯಿ ಮೀನು ಬಲೆಗೆ ಬಿದ್ದಿದೆ.
ಸುಮಾರು 30 ಟನ್ ಗೂ ಅಧಿಕ ಭೂತಾಯಿ ಮೀನು ಬಲೆಗೆ ಬಿದ್ದಿದ್ದು, 30 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮೀನು ಮಾರಾಟವಾಗಿದೆ.
ಅಸಾನಿ ಚಂಡ ಮಾರುತದ ಪರಿಣಾಮದಿಂದ ಕಡಲು ಪ್ರಕ್ಷ್ಯುಬ್ದ ಗೊಂಡಿದ್ದು, ಭೂತಾಯಿ ಮೀನು ಗಂಗೊಳ್ಳಿಯಿಂದ ಮಂಗಳೂರು ಕರಾವಳಿ ತೀರದಲ್ಲಿ ಹೆಚ್ಚಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
