ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ; ಇಬ್ಬರ ಬಂಧನ -Vishwanews24

Featured, ಉಡುಪಿ

ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ; ಇಬ್ಬರ ಬಂಧನ -Vishwanews24

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲೆಂದು ನಿಂತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಮಾ.22ರ ಭಾನುವಾರ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಗೌತಮ್ ಮತ್ತು ವಿಜಿ ಎಂದು ಗುರುತಿಸಲಾಗಿದೆ. ಇವರು ಪುತ್ತೂರು ಗ್ರಾಮದ ನಿಟ್ಟೂರು ಆಭರಣ ಷೋರೂಮಿನ ಹಿಂಭಾಗದ ಶ್ರೀ ಮೂಕಾಂಬಿಕಾ ಪಾಲಿ ಪ್ರಾಡ್ಟಕ್ಸ್ ಎದುರು ರಸ್ತೆಯ ಬಳಿ ಗಾಂಜಾ ಮಾರಾಟ ಮಾಡಲು ನಿಂತಿದ್ದರು. ಆರೋಪಿತರು ಗಾಂಜಾವನ್ನು ಮಂಗಳೂರಿನ ನವೀನ್‌ ಎಂಬಾತನಿಂದ ಮಾರಾಟದ ಸಲುವಾಗಿ ಖರೀದಿಸಿ ತಂದಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಮಂಗಳೂರು : ಸೌದಿಯಲ್ಲಿ ಉಳ್ಳಾಲದ ವ್ಯಕ್ತಿ ನಿಗೂಢ ಸಾವು : ಮೃತದೇಹ ತವರೂರಿಗೆ ತರಲು ಸ್ಪಂದಿಸಿದ ಶಾಸಕ ಯು.ಟಿ ಖಾದರ್ -Vishwanews24

ಆರೋಪಿತರ ವಶದಿಂದ 4,500/- ರೂಪಾಯಿ ಮೌಲ್ಯದ 150 ಗ್ರಾಂ ಗಾಂಜಾ ಎರಡು ಮೊಬೈಲ್ ಫೋನ್‌ಗಳು ಹಾಗೂ ನಗದು ಹಣ 720 ರೂಪಾಯಿಯನ್ನು ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ದೂರು ದಾಖಲಾಗಿದೆ.