ಕಾಪು ಸುಗ್ಗಿ ಮಾರಿಪೂಜೆ- ಬಾರ್ ಬಂದ್ ಆದೇಶ ವಾಪಸ್ಸು- ಎಂದಿನಂತೆ ಬಾರ್- ರೆಸ್ಟೋರೆಂಟ್ ಓಪನ್ – vishwanews24

Featured, ಉಡುಪಿ

ಕಾಪು ಸುಗ್ಗಿ ಮಾರಿಪೂಜೆ- ಬಾರ್ ಬಂದ್ ಆದೇಶ ವಾಪಸ್ಸು- ಎಂದಿನಂತೆ ಬಾರ್- ರೆಸ್ಟೋರೆಂಟ್ ಓಪನ್ – vishwanews24

ಕಾಪು: ಕಾಪು ತಾಲೂಕಿನ ಕಾಪುವಿನ ಮಾರಿ ಗುಡಿಗಳಲ್ಲಿ ಸುಗ್ಗಿ ಮಾಡಿ ಪೂಜೆಯು ನಡೆಯುವ ಸಂದರ್ಭದಲ್ಲಿ ಕಾನೂನು
ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಟ್‌ಗಳ ಮದ್ಯ ಮಾರಾಟವನ್ನು ದಿನಾಂಕ:23/03/2021 ರ ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ:24/03/2021 ರಂದು ರಾತ್ರಿ 12.00 ಗಂಟೆಯವರೆಗೆ ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿಲಾಗಿರುತ್ತದೆ.

ಉಲ್ಲೇಖ(2) ರ ಪೊಲೀಸ್ ಅಧೀಕ್ಷಕರ ಪತ್ರದಲ್ಲಿ ದಿನಾಂಕ: 22-03-2021 ರಂದು ಕಾಪು ಠಾಣ ವ್ಯಾಪ್ತಿಯ ಪಡು, ಮೂಳೂರು, ಮಜೂರು ಗ್ರಾಮ ವ್ಯಾಪ್ತಿಯಲ್ಲಿರುವ ಮದ್ಯ ಮಾರಾಟ ಅಂಗಡಿ (ವೈನ್ ಶಾಪ್, ಬಾರ್ ಎಂಡ್ ರೆಸ್ಟೋರೆಂಟ್) ಗಳ ಮಾಲಿಕರು ಠಾಣೆಗೆ ಹಾಜರಾಗಿ ಈತನಕ ಸುಗ್ಗಿ ಮಾರಿ ಪೂಜೆ ದಿನದಂದು (ಎರಡು ದಿನ) ಯಾವುದೇ ರೀತಿಯ ಕಾನೂನು ಇವತ್ತಿಗೆ ಹಾಗೂ ಸಾರ್ವಜನಿಕ ಶಾಂತಿ ಭಂಗ ಪ್ರಕರಣಗಳು ದಾಖಲಾಗಿರುವುದಿಲ್ಲ ಅಲ್ಲದೇ ಸುಗ್ಗಿ ಮಾಡಿ ಪೂಜೆ ದಿನದಂದು ಈ ತನಕ ಮಧ್ಯ ಮಾರಾಟ ನಿಷೇದವಾಗಿರುವುದಿಲ್ಲ, ಅಲ್ಲದೇ ಕಳೆದೊಂದು ವರ್ಷದಿಂದ ಕೊರೊನಾ ಮಹಾಮಾರಿಯಿಂದ ಸನದುದಾರರಿಗೆ ಅರ್ಥಿಕವಾಗಿ ತುಂಬಲಾರದ ನಷ್ಟ ಉಂಟಾಗಿರುವುದರಿಂದ ದಿನಾಂಕ: 23-03-240721 ಮತ್ತು ದಿನಾಂಕ: 24-03-2021 ರಂದು ಯಥಾಸ್ಥಿತಿಯಲ್ಲಿ ಮಧ್ಯ ಮಾರಾಟ ಮಾಡಲು ಅನುಮಾಡಿ ಕೊಡಬೇಕೆಂದು ಕೊಡಿ ಮನವಿ ಪತ್ರ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗಿ ಸುಗ್ಗಿ ಮಾರಿ ಪೂಜೆ ದಿನದಂದು ಯಾವುದೇ ಕಾನೂನು ವ್ಯವಸ್ಥೆಗೆ ಹಾಗೂ ಸಾರ್ವಜನಿಕ ಶಾಂತಿ ಭಂಗ ಪ್ರಕರಣಗಳು ದಾಖಲಾಗದೆ ಇರುವುದರಿಂದ ವೈನ್ ಶಾಪ್ ,ಬಾರ್ ಎಂಡ್ ರೆಸ್ಟೋರೆಂಟ್ ಗಳ ಮಾಲಿಕರು “ ಡ್ರೈ ಡೇ” ಆದೇಶದಲ್ಲಿ ಸಡಿಲಿಕೆ ಮಾಡುವಂತೆ ಕೋರಿರುವ ಹಿನ್ನೆಲೆಯಲ್ಲಿ ದಿನಾಂಕ 23/03/2021ಬೆಳಗ್ಗೆ 6 ಗಂಟೆಯಿಂದ ದಿನಾಂಕ 24/3/2021 ರ ರಾತ್ರಿ 12.00 ಗಂಟೆಯವರೆಗೆ ಪೊಲೀಸ್ ಠಾಣಾ ಸರಹದ್ದಿನ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಪ್ರಕಟನೆ ತಿಳಿಸಿದೆ.