ಉಡುಪಿ: ಹುಲಿವೇಷಧಾರಿಗಳ ಟೆಂಪೋ ಪಲ್ಟಿ : ಓರ್ವ ಸಾವು, ಹಲವು ಮಂದಿಗೆ ಗಾಯ -Vishwanews24
ಉಡುಪಿ: ಹುಲಿವೇಷ ತಂಡದ ಟೆಂಪೋವೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಸಂತೆಕಟ್ಟೆಯ ನೇಜಾರು ಸಮೀಪ ಇಂದು ನಡೆದಿದೆ.
ಪಡುಬಿದ್ರಿಯ ಸುಮಂತ್ (22) ಮೃತ ವೇಷಧಾರಿ ಎಂದು ಗುರುತಿಸಲಾಗಿದೆ.


ಗಾಯಗೊಂಡ ಹುಲಿವೇಷಧಾರಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹುಲಿವೇಷಧಾರಿಗಳನ್ನು ಹೊತ್ತ ಟೆಂಪೋ ನೇಜಾರಿನಿಂದ ಸಂತೆಕಟ್ಟೆಗೆ ಹೋಗುತ್ತಿತ್ತು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿ ಪಲ್ಟಿಯಾಗಿದ್ದು, ಇದರಿಂದ ಗಂಭೀರ ಗಾಯಗೊಂಡ ಸುಮಂತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಐವರು ವೇಷಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಕಲ್ಯಾಣಪುರ ಗೋರಟ್ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
