ಉಳ್ಳಾಲ: ಬಸ್ ನಲ್ಲಿ ಕಳೆದುಹೋದ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಮಾಲೀಕರ ಸಹಕಾರದೊಂದಿಗೆ ಪೊಲೀಸರಿಗೆ ವಾಪಸ್ಸು ಮಾಡಿ ಪ್ರಾಮಾಣಿಕತೆ ಮೆರೆದ ಘಟನೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಜ.1 ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ 44ಸಿ ಬಸ್ಸಿನಲ್ಲಿ ಬಿಸಿರೋಡ್ ಮೂಲದ ಮಹಿಳೆ ತಸ್ಲಿಮಾ ಪ್ರಯಾಣಿಸುತ್ತಿರುವಾಗ 18 ಗ್ರಾಂ ತೂಕದ ಚಿನ್ನದ ಬಳೆಯನ್ನು ಕಳೆದುಕೊಂಡಿದ್ದರು.ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ಮದುವೆ ಸಮಾರಂಭಕ್ಕೆ ತೆರಳುವಾಗ ಘಟನೆ ನಡೆದಿತ್ತು.
ಬಸ್ ನಲ್ಲಿ ಸಿಕ್ಕ ಬಂಗಾರದ ಬಳೆಯನ್ನು ಬಸ್ ಚಾಲಕ ನಿಸಾರ್ ಅಹಮ್ಮದ್ ಹಾಗೂ ನಿರ್ವಾಹಕ ಇಬ್ರಾಹಿಂ ಮಂಜನಾಡಿ ಇಬ್ಬರು ಬಸ್ ಮಾಲೀಕ ಅಬ್ದುಲ್ ರಝಾಕ್ ಎಂಬವರ ಗಮನಕ್ಕೆ ತಂದಿದ್ದರು. ಅವರು ಜ.2 ರಂದು ಉಳ್ಳಾಲ ಪೊಲೀಸ್ ಠಾಣೆಗೆ ಆಗಮಿಸಿ ಚಿನ್ನವನ್ನು ನೀಡಿ ಪ್ರಾಮಾಣಿಕತನ ಮೆರೆದರು.
ಇದೇ ಸಂದರ್ಭ ಚಿನ್ನ ಕಳೆದುಕೊಂಡ ಮಹಿಳೆ ತಸ್ಲೀಮಾ ಅವರು ಠಾಣೆಗೆ ಆಗಮಿಸಿದ್ದು, ಅವರಿಗೆ ಎಸ್. ಐ ಶಿವು ಕುಮಾರ್ ಸಮ್ಮುಖದಲ್ಲಿ ಕಳೆದುಹೋದ ಚಿನ್ನವನ್ನು ವಾಪಸ್ಸು ನೀಡಲಾಯಿತು.
ಉಡುಪಿ: ಅ.9ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ, ಸ್ಟಡಿ ಅಬ್ರಾಡ್ ಎಕ್ಸ್ಪೋ; 2,500 ಉದ್ಯೋಗಾವಕಾಶಗಳ ನಿರೀಕ್ಷೆ ಉಡುಪಿ: ಉಡುಪಿ ಗ್ರಾಮೀಣ…
ಸುರತ್ಕಲ್ ಎನ್‌ಐಟಿಕೆಯಲ್ಲಿ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯ ಮುಂಭಾಗದಲ್ಲಿ…
ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…
ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…
ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…