ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ – vishwanews24
ಒಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವಿಕ ಸಾವು ; 13 ಮಂದಿ ರಕ್ಷಣೆ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರು, “ಅಲ್ ಜುಸುಫಿ ಹೆಸರಿನ ಹಡಗು ಒಮನ್ ಕರಾವಳಿಯಲ್ಲಿ ಸಾಗುತ್ತಿದ್ದಾಗ ವೈಮಾನಿಕ ವಸ್ತುವೊಂದು ಹಡಗಿನ ಮೇಲೆ ದಾಳಿ ನಡೆಸಿದೆ. ಈ ಹಡಗಿನಲ್ಲಿ ಒಟ್ಟು 14 ಮಂದಿ ಭಾರತೀಯ ನಾವಿಕರಿದ್ದರು” ಎಂದು ತಿಳಿಸಿದ್ದಾರೆ.
ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ : ಬಿ.ವೈ. ವಿಜಯೇಂದ್ರ – vishwanews24
“ನವೆಂಬರ್ 2ರಂದು ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಒಮನ್ ಕರಾವಳಿ ರಕ್ಷಣಾ ಪಡೆ 13 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ರಕ್ಷಿಸಿದೆ. ಆದರೆ, ಗುಜರಾತ್ ಮೂಲದ ಗಂಧರ್ ನಹೀಮ್ ಅಜೀಜ್ ಎಂಬ ನಾವಿಕ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ” ಎದು ಮಾಹಿತಿ ನೀಡಿದ್ದಾರೆ.
“ನಾವಿಕನ ಸಾವಿಗೆ ಸಚಿವ ಸರ್ಬಾನಂದ ಸೋನೋವಾಲ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತ ನಾವಿಕನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಸಂಕಷ್ಟದಲ್ಲಿರುವ ಉಳಿದ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ನಂದಿನಿ ಮೊಸರಿನ ದರ ಇಳಿಕೆಗೆ ಸಿಎಂ. ಸೂಚನೆ – vishwanews24
“ಈ ಸಂಬಂಧ ಹಡಗು ಸಚಿವಾಲಯ ಮತ್ತು ಒಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ರಕ್ಷಿಸಲ್ಪಟ್ಟ 13 ಮಂದಿ ನಾವಿಕರಿಗೆ ತಕ್ಷಣದ ನೆರವು ಒದಗಿಸುವುದು ಹಾಗೂ ಅವರನ್ನು ಶೀಘ್ರವೇ ಭಾರತಕ್ಕೆ ವಾಪಸ್ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ. ಮೃತಪಟ್ಟ ನಾವಿಕನ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆಯನ್ನೂ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
