ಕಂಬಳ ಕರೆಗೆ ಇಳಿಯುವ ಮೂಲ ಕಂಬಳದಲ್ಲಿ ಹೊಸ ಭರವಸೆ ಮೂಡಿಸಿದ ಕುಂದಾಪುರದ ಚೈತ್ರ ಪರಮೇಶ್ವರ್ ಭಟ್ -Vishwanews24

Featured, ಉಡುಪಿ

ಕಂಬಳ ಕರೆಗೆ ಇಳಿಯುವ ಮೂಲ ಕಂಬಳದಲ್ಲಿ ಹೊಸ ಭರವಸೆ ಮೂಡಿಸಿದ ಕುಂದಾಪುರದ ಚೈತ್ರ ಪರಮೇಶ್ವರ್ ಭಟ್ -Vishwanews24

ಕಾರ್ಕಳ : ಕೃಷಿ ಪರಂಪರೆಯ ಕಂಬಳದಲ್ಲಿ ಹೊಸ ದಾಖಲೆ, ಪ್ರಯೋಗ ನಡೆದೇ ಇದೆ. ಇತ್ತೀಚೆಗಷ್ಟೇ ಬಜಗೋಳಿಯ ಬಾಲಕ ಕೋಣಗಳ ಜತೆ ಓಡಿ ಸಂಚಲನ ಮೂಡಿಸಿದ್ದು, ಈಗ ಬಾಲಕಿಯೋರ್ವಳು ಕಂಬಳ ಕರೆಗೆ ಇಳಿಯುವ ಮೂಲಕ ಕಂಬಳದಲ್ಲಿ ಹೊಸ ಭರವಸೆ ಸೃಷ್ಟಿಸುವ ಆಶಾವಾದ ಮೂಡಿಸಿದ್ದಾಳೆ.

ಕೆಲ ದಿನಗಳ ಹಿಂದೆ ಮಿಯ್ನಾರುವಿನ ಲವಕುಶ ಜೋಡುಕರೆ ಕಂಬಳದಲ್ಲಿ ಪರಮೇಶ್ವರ ಭಟ್‌ ಅವರ ಪುತ್ರಿ ಚೈತ್ರಾ ಮೊತ್ತಮೊದಲ ಬಾರಿಗೆ ಕಂಬಳ ಕರೆಗೆ ಇಳಿದಿದ್ದಾಳೆ. ಈ ಮೂಲಕ ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಬಾಲಕಿಯ ಪ್ರವೇಶವಾಗಿದೆ. ಬೋಳಂಬಳ್ಳಿಯ ಕುವರಿ ಕುಂದಾಪುರ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್‌ -ರಮ್ಯಾ ದಂಪತಿಯಇಬ್ಬರು ಮಕ್ಕಳಲ್ಲಿ ಚೈತ್ರಾ ಹಿರಿಯವಳು.

ಪಡುಬಿದ್ರಿ: UPCL ಬೃಹತ್ ಗಾತ್ರದ ಪೈಪ್‌ಲೈನ್ ತುಂಡು: ಉಪ್ಪು ಮಿಶ್ರಿತ ಬಿಸಿ ನೀರು ಮತ್ತೆ ಸಮುದ್ರಕ್ಕೆ ; ಸ್ಥಳೀಯರ ಆಕ್ರೋಶ -Vishwanews24

ವಯಸ್ಸು 11. ಕಾಲ್ತೊಡು ಸರಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆ ಮಿಯ್ನಾರು ಕಂಬಳದಲ್ಲಿ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ, ಕಂಬಳ ಕರೆಗೆ ಇಳಿದಿದ್ದಳು. ಈಕೆಯ ಸಹೋದರ ರಾಮ್‌ ಭಟ್‌ ಕೂಡ ಕಂಬಳಪ್ರೇಮಿ.ಬಾಲ್ಯದಿಂದಲೇ ಆಸಕ್ತಿ ಚೈತ್ರಾಗೆ ಕಂಬಳ ಕೋಣಗಳೆಂದರೆ ತುಂಬಾ ಪ್ರೀತಿ. ಚಿಕ್ಕ ವಯಸ್ಸಿನಲ್ಲೇ ಕಂಬಳ ಕೋಣಗಳಿಗೆ ಸ್ನಾನಮಾಡಿಸುತ್ತ, ಹುರುಳಿ ಬೇಯಿಸಿ ತಿನ್ನಿಸುತ್ತ, ತಂದೆ- ತಾಯಿಗೆ ಸಹಾಯ ಮಾಡುತ್ತ ಬೆಳೆದವಳು. ಕೋಣಗಳ ಮೇಲಿನ ಈಕೆಯ ಪ್ರೀತಿ ಕಂಬಳದ ಕರೆಗೆ ಇಳಿಯುವ ಮೂಲಕ ಮುಂದುವರಿದಿದೆ. ಕೃಷಿಕ ಪರಮೇಶ್ವರ್‌ ಭಟ್‌ 25 ವರ್ಷಗಳಿಂದ ಕೋಣಗಳನ್ನು ಸಾಕುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಬೆದರಿಕೆ ಕರೆಗಳು ಬರುತ್ತಿರುವ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗದ ದಿನೇಶ್ ಕಲ್ಲಹಳ್ಳಿ -Vishwanews24

ಕಳೆದ ನಾಲ್ಕು ವರ್ಷಗಳಿಂದ ದ.ಕ., ಉಡುಪಿ ಜಿಲ್ಲೆಯ ಕಂಬಳಗಳಲ್ಲಿ ಭಾಗವಹಿಸುತ್ತಿದ್ದಾರೆ. ಆಗೆಲ್ಲ ಚೈತ್ರಾಳಿಗೆ ಅವಕಾಶ ಸಿಕ್ಕಿರಲಿಲ್ಲ. ಮಿಯ್ನಾರುವಿನಲ್ಲಿ ನಡೆದ ಕಂಬಳದಲ್ಲಿ ಈಕೆಗೆ ಅವಕಾಶ ದೊರೆತಿದೆ.