ಕಟಪಾಡಿ: ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು ಸುರಕ್ಷ ಕಾಮಗಾರಿ ಆರಂಭ – vishwanews24
ಕಟಪಾಡಿ: ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು ಸುರಕ್ಷ ಕಾಮಗಾರಿ ಆರಂಭ
ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾ. ಪಂ. ವ್ಯಾಪ್ತಿಯ ಮಟ್ಟು ಬೀಚ್‌ನಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಮತ್ತಷ್ಟು ಹಾನಿಯನ್ನು ತಪ್ಪಿಸಲು ತುರ್ತು ಸುರಕ್ಷ ಕಾಮಗಾರಿ ಆರಂಭವಾಗಿದೆ.
ಕಳೆದ ಎರಡು ದಿನಗಳಿಂದ ಬೃಹತ್ ಗಾತ್ರದ ಬಂಡೆ ಕಲ್ಲುಗಳನ್ನು ಟಿಪ್ಪರ್ ಮೂಲಕ ತಂದು ಜೆಸಿಬಿ ಸಹಾಯದಿಂದ ಕಡಲ ತೀರದಲ್ಲಿ ಹಾಕಲಾಗುತ್ತಿದೆ. ಪ್ರಕ್ಷುಬ್ಧಗೊಂಡಿರುವ ಕಡಲಿನ ಭಾರೀ ಗಾತ್ರದ ಅಲೆಗಳ ಅಬ್ಬರಕ್ಕೆ ಕೆಲವು ತೆಂಗಿನ ಮರಗಳು, ಸಿಮೆಂಟ್ ಬೆಂಚ್ ಹಾಗೂ ಎತ್ತರದ ಪ್ರದೇಶದ ಭಾಗ, ಬಂಡೆ ಕಲ್ಲುಗಳು ಕಡಲು ಪಾಲಾಗಿತ್ತು. ಅಪಾಯ ಸ್ಥಿತಿಯಲ್ಲಿದ್ದ ಹೈಮಾಸ್ಟ್ ಲೈಟ್ ಕಂಬ, ಮೂರು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿತ್ತು. ಕಾಪು-ಮಲ್ಪೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮೀನುಗಾರಿಕ ರಸ್ತೆ ಅಪಾಯದ ಸ್ಥಿತಿಯಲ್ಲಿತ್ತು. ಮಟ್ಟು ಬೀಚ್ ಕಡಲ ತೀರದ ಸಂರಕ್ಷಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಜನಪರ ವರದಿಯನ್ನು ಉದಯವಾಣಿ ನಿರಂತರವಾಗಿ ಪ್ರಕಟಿಸಿತ್ತು.
ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ – vishwanews24
ಮಟ್ಟು ಬೀಚ್ ಭಾಗದಲ್ಲಿ ನಿರಂತರ ಕಡಲ್ಕೊರೆತದ ತೀವ್ರತೆಯನ್ನು ಮನಗಂಡು ಶಿಫಾರಸು ಗೊಳಿಸಿ ತುರ್ತು ಸುರಕ್ಷ ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಇದೀಗ ಮಟ್ಟು ಬೀಚ್ ಪ್ರದೇಶದಲ್ಲಿ ತುರ್ತಾಗಿ ತಾತ್ಕಾಲಿಕ ಸುರಕ್ಷ ಕಾಮಗಾರಿ ಆರಂಭಿಸಲಾಗಿದೆ ಎಂದು ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಸನ್ನ ಕುಮಾರ್ ಶೇಟ್ ತಿಳಿಸಿದ್ದಾರೆ.
