ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ – vishwanews24

Featured, ಉಡುಪಿ

ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ

ಮಣಿಪಾಲ: ನೆಟ್‌ವರ್ಕ್‌ ಸೌಲಭ್ಯ ಸಮರ್ಪಕವಾಗಿ ಲಭ್ಯವಿಲ್ಲದ ಗ್ರಾಮೀಣ ಗ್ರಾಹಕರ ಹಿತ ದೃಷ್ಟಿಯಿಂದ ಪ್ರಸ್ತುತ ಇರುವ ಒಟಿಪಿ ಆವಶ್ಯಕತೆಯ ಪ್ರಮಾಣವನ್ನು ಶೇ. 98ರಿಂದ ಶೇ. 80ಕ್ಕೆ ಇಳಿಸಬೇಕು. ಇದರಿಂದ ನೆಟ್‌ವರ್ಕ್ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಪಡೆಯಲು ಅನುಕೂಲವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಗ್ಯಾಸ್ ಎಜೆನ್ಸಿಗಳಿಗೆ ಇಂಡಿಯನ್ ಆಯಿಲ್ ಕಾರ್ಪೊ ರೇಶನ್ (ಐಒಸಿ) ವತಿಯಿಂದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಸಮರ್ಪಕ ಹಾಗೂ ಸಮಯೋಚಿತ ಪೂರೈಕೆಯಾಗದಿರುವ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀ ರ್ಣದ ಸಂಸದರ ಕಚೇರಿಯಲ್ಲಿ ಸಭೆ ನಡೆಯಿತು.

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ – vishwanews24

ಜಿಲ್ಲೆಯ ದೂರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಎಲ್‌ಪಿಜಿ ವಿತರಣೆಯ ಸಂದರ್ಭದಲ್ಲಿ ಒಟಿಪಿ ಆಧಾರಿತ ದೃಢೀಕರಣದಲ್ಲಿ ಗ್ರಾಹಕರು ಹಾಗೂ ಎಜೆನ್ಸಿಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯ ವಿವಿಧ ಗ್ಯಾಸ್‌ ಎಜೆನ್ಸಿಗಳ ಪ್ರತಿನಿಧಿಗಳು ಭಾಗವಹಿಸಿ, ಕಳೆದ ಕೆಲವು ದಿನಗಳಿಂದ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಗ್ರಾಹಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನ ಸೆಳೆದರು.

ಜಿಲ್ಲೆಯ ಗ್ಯಾಸ್ ಎಜೆನ್ಸಿಗಳಿಗೆ ಅಗತ್ಯ ಪ್ರಮಾಣದಲ್ಲಿ ಗೃಹ ಬಳಕೆ ಎಲ್‌ಪಿಜಿ ಪೂರೈಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿ ದರು. ಗ್ರಾಹಕರಿಗೆ ಗ್ಯಾಸ್ ವಿತ ರಣೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ – vishwanews24

ಆಹಾರ ಇಲಾಖೆ ಅಧಿಕಾರಿ ಪ್ರಕಾಶ್, ಐಒಸಿಎಲ್ ಮಾರಾಟ ಅಧಿಕಾರಿ ದೀಪಾ ಮತ್ತಿತರರಿದ್ದರು.

Leave a Reply