ಕಣ್ಣೂರು: ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ :  18 ತಿಂಗಳ ಮಗು ನಿಧನ  ; ವೈದ್ಯರ ವಿರುದ್ಧ ಪ್ರಕರಣ ದಾಖಲು – vishwanews24

Featured, ರಾಷ್ಟ್ರ ನ್ಯೂಸ್

ಕಣ್ಣೂರು: ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ :  18 ತಿಂಗಳ ಮಗು ನಿಧನ  ; ವೈದ್ಯರ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ: 18 ತಿಂಗಳ ಮಗುವಿಗೆ ವೈದ್ಯರು ತುಟಿಯ ಶಸ್ತ್ರಚಿಕತ್ಸೆಗಾಗಿ ಅನಸ್ತೇಶಿಯಾ ನೀಡಿದ ನಂತರ ಮಗು ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರು ಆಸ್ಪತ್ರೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಕಣ್ಣೂರಿನ ಎರಾಮಮ್-ಕುತ್ತೂರು ನಿವಾಸಿಗಳಾದ ಟಿ ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರ ದೇವಾಂಶ್ ಶೌರ್ಯ ಜುಲೈ 5 ರಂದು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಿದ್ದು ತುಟಿ ಸೀಳು ಬಿಟ್ಟಿತ್ತು. ಪೋಷಕರು ಮಗುವನ್ನು ತಕ್ಷಣವೇ ಮತಾಮಂಗಲಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಕಿತ್ಸೆ ಕೊಡಿಸಿದ್ದರು.

ಶಿರ್ವ ವಿದ್ಯಾವರ್ಧಕ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಯಾಗಿ ಮಟ್ಟಾರ್ ರತ್ನಾಕರ್ ಹೆಗ್ಡೆ ಆಯ್ಕೆ – vishwanews24

ನಂತರ ಮಗುವನ್ನು ಪಯ್ಯನ್ನೂರು ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮಗುವಿಗೆ ಅನಸ್ತೇಶಿಯಾ ನೀಡಿ ಶಸ್ತ್ರಕ್ರಿಯೆ ನಡೆಸಿ ಹೊಲಿಗೆ ಹಾಕಿದ್ದು, ನಂತರ ಮಗು ಪ್ರಜ್ಞೆ ಕಳೆದುಕೊಂಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಈ ಘಟನೆ ನಂತರ ಪೋಷಕರು ಮಗುವನ್ನು ಕಣ್ಣೂರು ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಶುಕ್ರವಾರ (ಜು.10) ರಾತ್ರಿ 9ಗಂಟೆಗೆ ಮಗು ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.

ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ – vishwanews24

ಕಣ್ಣೂರು ಆಸ್ಪತ್ರೆಯ ವೈದ್ಯೆ ಅಂಜಲಿ ಪೊದುವಾಳ್ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿರುವುದಾಗಿ ಮಗುವಿನ ಪೋಷಕರು ದೂರು ದಾಖಲಿಸಿದ್ದಾರೆ. ಆದರೆ ವೈದ್ಯರ ಪ್ರಕಾರ ಮಗು ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದಾಗಿ ಸಮಜಾಯಿಷಿ ನೀಡಿದ್ದಾರೆ. ವೈದ್ಯೆ ಅಂಜಲಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 125 ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply