ಕಾಪು ಆಟೋ ರಿಕ್ಷಾ ಯೂನಿಯನ್: ರಿಕ್ಷಾ ಚಾಲಕ ಮಾಲೀಕರಿಗೆ ಆಹಾರದ ಕಿಟ್ ವಿತರಣೆ.
ಕಾಪು ಆಟೋ ರಿಕ್ಷಾ ಯೂನಿಯನ್: ರಿಕ್ಷಾ ಚಾಲಕ ಮಾಲೀಕರಿಗೆ ಆಹಾರದ ಕಿಟ್ ವಿತರಣೆ.
ಕಾಪು: ಕಾಪು ಆಟೋ ರಿಕ್ಷಾ ಚಾಲಕ ಮಾಲಕ ಸಂಘ ಇದರ ಸ್ವಂತ ಬಂಡವಾಳದ ವತಿಯಿಂದ ಕಾಪು ಹಳೇ ಮಾರಿಗುಡಿ ದೇವಸ್ಥಾನದ ವಠಾರದಲ್ಲಿ ಸುಮಾರು 170 ಮಂದಿ ಚಾಲಕ ಮಾಲಕರಿಗೆ ಅಕ್ಕಿ ಸಹಿತ ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು.

ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ ಉಪಸ್ಥಿತಿಯಿದ್ದು” ಆಟೋ ಚಾಲಕರನ್ನು ಸರ್ಕಾರದ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಪರಿಗಣನೆಗೆ ಪಡೆಯಬೇಕು ,ತುರ್ತು ಸೇವೆ ಅಥವಾ ಇತರ ಸೇವೆಯಲ್ಲಿ ಅಂಬ್ಯುಲೆನ್ಸ್ ಗಳ ರೀತಿಯಲ್ಲಿ ಸೇವೆ ಮಾಡುವುದರ ಜತೆಗೆ ಜನೋಪಕಾರಿಯಾಗಿದೆ ಮತ್ತು ಎಲ್ಲಾ ರಿಕ್ಷಾ ಚಾಲಕರಿಗೆ ತಕ್ಷಣ ಲಸಿಕೆ ನೀಡುವ ಕೆಲಸ ಕೂಡ ನಡೆಯಬೇಕಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಹಾಗೂ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗಂಗಾಧರ ಸುವರ್ಣ ಕಿಟ್ ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಭೋಜರಾಜ ಮೂಳೂರು, ಕೋಶಾಧಿಕಾರಿ ಉಮೇಶ್ ಮಲ್ಲಾರ್ ಉಪಸ್ಥಿತರಿದ್ದರು.
ವರದಿ: ಬ್ಯೂರೋ ರಿಪೋರ್ಟ್ -vishwanews24.
