ಈ ಬಾರಿಯಂತೂ ಕಾಂಗ್ರೇಸ್ ಪಾರ್ಟಿಗೆ ಪುರಸಭಾ ವ್ಯಾಪ್ತಿಯಲ್ಲಿ ಪೂರಕ ವಾತಾವರಣ ಇದ್ದರೂ ಕೂಡ ಚುನಾವಣ ಫಲಿತಾಂಶದಲ್ಲಿ ಎರಡಂಕಿ ಮುಟ್ಟಲು ಸಾಧ್ಯವಾಗಿಲ್ಲ, ಕಡೇ ಪಕ್ಷ ಕಳೆದ ಚುನಾವಣೆಯಲ್ಲಿ ಗೆದ್ದು ಬಂದ ವಾರ್ಡನ್ನು ಕೂಡ ಉಳಿಸಿಕೊಳ್ಳುವಲ್ಲಿ ಕೂಡ ವಿಫಲವಾಗಿದೆ.ಕೇವಲ ೭ ಸೀಟು ಗೆಲ್ಲುವಲ್ಲಿ ಕಾಂಗ್ರೇಸ್ ಸಫಲತೆಯನ್ನು ಕಂಡಿದೆ ಹಾಗಾದರೇ ಕಾಂಗ್ರೇಸ್ ಎಡವಿದ್ದು ಎಲ್ಲಿ ಎಂಬ ಪ್ರಶ್ನೆ…?
ಕಾಂಗ್ರೇಸ್ ಅಂದಿನಿAದ ಕೂಡ ಅಲ್ಪಸಂಖ್ಯಾತರು ಓಟ್ ಬ್ಯಾಮಕ್ ಎಂದು ತಿಳಿದದ್ದು ಈ ಬಾರಿ ಎಡವಟ್ಟಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಜತೆ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಮತ್ತು ಆಂತರಿಕ ಹಾಗೂ ಬಾಹ್ಯ ಬೆಂಬಲ ನೀಡಿದವರು ಈ ಬಾರಿ ಎಸ್,ಡಿ,ಪಿ,ಐ ಜತೆಗೆ ಸೇರಿಕೊಂಡು ಕಾಂಗ್ರೇಸ್‌ಗೆ ಟಕ್ಕರ್ ನೀಡಿದೆ.
ಕಾಪುವಿಗೆ ಪುರಸಭೆ ತಂದರುವುದು ಅದರ ಜತೆಗೆ ನಗರಾಭಿವೃದ್ಧಿ ಪ್ರಾಧಿಕಾರ ಒಕ್ಕರಿಸಲು ಮೂಲ ಕಾರಣ ಕಾಂಗ್ರೇಸ್ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಅದರಿಂದ ಸಂಕಷ್ಟಕ್ಕೊಳಗಾದ ಕಾಂಗ್ರೇಸ್ಸಿಗರು ಕೂಡ ಈ ಬಾರಿ ಕೈ ಬಿಟ್ಟಿರುವುದು.
ಮೊನ್ನೆಮೊನ್ನೆಯವರೆಗೂ ಅಲ್ಪಸಂಖ್ಯಾತರ ಬೆನ್ನಿಗಿದ್ದ ಕಾಂಗ್ರೇಸ್ ಈ ಬಾರಿ ನೇರವಾಗಿ ಎಸ್,ಡಿ,ಪಿ,ಐ ನ್ನು ವಿರೋಧಿಸಿ ಅದರೊಳಗಿದ್ದ ಕೆಲವೊಂದು ಅಲ್ಪಸಂಖ್ಯಾತ ಕಾಂಗ್ರೇಸ್ ಕಾರ್ಯಕರ್ತರಿಗೆ ಬೇಸರ ಉಂಟುಮಾಡಿದ್ದು ಕೂಡ ಕಾರಣವಾಯಿತು.
ಬಿಜೆಪಿಯ ಕಾರ್ಯಕರ್ತರಿಗೆ ಸ್ಥಳಿಯ ನಾಯಕರ ಮೇಲಿನ ಅಸಮಧಾನವನ್ನು ಕಾಂಗ್ರೆಸ್ ಕ್ಯಾಚ್ ಮಾಡಿಕೊಂಡು ಗೆದ್ದೆ ಗೆಲ್ಲುವೆವು ಎಂಬ ಭ್ರಮೆಯಿಂದ ಹೊರಬಾರದೆ ಇದ್ದದ್ದು ಕೂಡ ಕಾರಣವಾಗಿರಬಹುದು.
ಇನ್ನು ೨೩ ವಾರ್ಡಿನ ಮೇಲೆ ನಿಗಾವಹಿಸಿ ಕಾರ್ಯತಂತ್ರ ಮಾಡಲು ಕೇವಲ ವಿನಯ್ ಕುಮಾರ್ ಸೊರಕೆ ಒಬ್ಬರಾಗಿ ಸರಿಯಾಗಿ ಪರಿಣಾಮ ಬೀಳಲು ಕಷ್ಟವಾಗಿರಬಹುದು.
ಕೇಂದ್ರ-ರಾಜ್ಯ-ಸ್ಥಳಿಯವಾಗಿ ಕೂಡ ಅಧಿಕಾರ ಇಲ್ಲದೇ ಇರುವುದು ಕೂಡ ಕಾರಣವಾಗಿರಬಹುದು.
ಬ್ಯರೋ ರಿಪೋರ್ಟ್
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…